Friday, January 24, 2025
ಸುದ್ದಿ

ಸ್ನೇಹಿತನ ಪತ್ನಿಯೊಂದಿಗೆ ಲವ್ವಿಡವ್ವಿ : 2 ಮಕ್ಕಳ ತಾಯಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಕೊಲ್ಲುವ ಬೆದರಿಕೆ ಹಾಕಿದ ತಸ್ಲೀಂ ಆರೀಫ – ಕಹಳೆ ನ್ಯೂಸ್

ಬಂಟ್ವಾಳ : ಮಹಿಳೆಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ಅ ಬಳಿಕ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಕೊನೆಗೆ ಕೊಲ್ಲುವ ಬೆದರಿಕೆ ಹಾಕಿದ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೊರೆಟ್ಟೊ ನಿವಾಸಿ ಅಬ್ದುಲ್ ಅಜೀಜ್ ಅವರ ಪತ್ನಿ ಮೇಲೆ ನರಿಕೊಂಬು ನಿವಾಸಿ ತಸ್ಲೀಂ ಆರೀಫ ಎಂಬಾತ ಅತ್ಯಾಚಾರ ಎಸಗಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿರುವ ಆರೋಪಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನೇಹಿತನೇ ಮುಳುವಾದ
ಸ್ನೇಹಿತನೆಂದು ಮನೆಗೆ ಕರೆದುಕೊಂಡು ಹೋದದ್ದೇ ತಪ್ಪಾಯಿತಾ? ಮನೆಗೆ ಬರುತ್ತಿದ್ದ ಸ್ನೇಹಿತ ಹೆಂಡತಿಯನ್ನೇ ಯಾಮಾರಿಸಿ ಬಿಟ್ಟ. ಸ್ನೇಹಿತನ ಪತ್ನಿಯನ್ನೇ ಲಪಟಾಯಿಸಿದ ಘಟನೆ ನಡೆದು ಇದೀಗ ಗಂಡನ ಬಿಟ್ಟು ಹೋದ ಪತ್ನಿಗೆ ಅತ್ತ ಗಂಡನು ಇಲ್ಲ,ಇತ್ತ ಆಸೆ ತೋರಿಸಿದ ಶೋಕಿ ಗಿರಾಕಿಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟಕ್ಕೂ ಕಥೆ ಏನಂತೀರಾ?
ಅಬ್ದುಲ್ ಅಜೀಜ್ ಸ್ನೇಹಿತನಾದ ನರಿಕೊಂಬು ನಿವಾಸಿ ತಸ್ಲೀಂ ಆರೀಫ ಗಂಡನ ಜೊತೆ ಮನೆಗೆ ಬರುತ್ತಿದ್ದು, ಸಲುಗೆ ಉಂಟಾಗಿ ಮೊಬೈಲ್ ನಂಬ್ರ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ.ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ, ಹಲವಾರು ಬಾರಿ ದೈಹಿಕ ಮತ್ತೆ ಮತ್ತೆ ಸುಳ್ಳು ಹೇಳಿ ಸಂಪರ್ಕ ನಡೆಸಿದ. ಇವರಿಬ್ಬರ ನಡುವಿನ ಪ್ರೇಮ ಪ್ರಕರಣ, ಮತ್ತು ದೈಹಿಕ ಸಂಪರ್ಕದ ವಿಚಾರ ಗಂಡನಿಗೆ ಗೊತ್ತಾಗಿ, ಅವಳಿಂದ ದೂರ ಇದ್ದ. ನಂತರ ಆರೋಪಿಯೊಂದಿಗೆ ಅಬ್ದುಲ್ ಅಜೀಜ್ ಪತ್ನಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ಧಳು.

3 ತಿಂಗಳ ಹಿಂದೆ ಆರೋಪಿ ತಸ್ಲೀಮಾ ಇಟ್ಟುಕೊಂಡವಳನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ. ಇದೀಗ ಆರೋಪಿ ತಸ್ಲೀಮಾ ಕುಲ್ಲಕ ಕಾರಣಕ್ಕೆ ಅಬ್ದುಲ್ ಅಜೀಜ್ ಪತ್ನಿ ಮುಖಕ್ಕೆ, ಬಾಯಿಗೆ ಕೈಯಿಂದ ಹೊಡೆದು, ಬಲಕಾಲಿನಿಂದ ಎಡ ಸೊಂಟಕ್ಕೆ ಒದ್ದಿರುವುದಲ್ಲದೆ, ತಲೆ ಕೂದಲನ್ನು ಕೈಯಿಂದ ಎಳೆದು ಬೇರ್ವಸಿ ರಂಡೆ ನಿನ್ನ ಮಕ್ಕಳು ನಿನ್ನ ಗಂಡನಿಗೆ ಹುಟ್ಟಿದ್ದ, ಬೇರೆಯವರಿಗೆ ಹುಟ್ಟಿದ್ದು ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ದು ಹೇಳೀ ಮನೆಯಿಂದ ಹೊರಟು ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.