ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ – ಕಹಳೆ ನ್ಯೂಸ್
ತಿರುವನಂತಪುರಂ: ಭಾರತದಲ್ಲಿ ಕೋವಿಡ್-19 ಭೀತಿ ಮತ್ತೆ ಶುರುವಾಗಿದೆ. ಕೇರಳದ (Kerala) ಮಹಿಳೆಯೊಬ್ಬರಲ್ಲಿ ಕೋವಿಡ್-19 ಉಪತಳಿ (Covid Subvariant) ಜೆಎನ್.1 (JN.1) ಪತ್ತೆಯಾಗಿರುವುದು ದೃಢಪಟ್ಟಿದೆ.
ಕೊರೊನಾ ವೈರಲ್ ಉಪತಳಿ ಜೆಎನ್.1 ವಿಶ್ವದಲ್ಲೇ ಮೊದಲ ಪ್ರಕರಣ ಅಮೆರಿಕದಲ್ಲಿ ಪತ್ತೆಯಾಯಿತು. ಭಾರತದಲ್ಲಿ ಪ್ರಸ್ತುತ ಕೋವಿಡ್-19 ಪ್ರಕರಣಗಳಲ್ಲಿ 90% ಕ್ಕಿಂತ ಹೆಚ್ಚು ಪ್ರಕರಣಗಳನ್ನು ಸೌಮ್ಯ ಎಂದು ವರ್ಗೀಕರಿಸಲಾಗಿದೆ. ವ್ಯಕ್ತಿಗಳು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಮೂಲಗಳು ಸೂಚಿಸಿವೆ.
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಪ್ರಯಾಣಿಕರೊಬ್ಬರಲ್ಲಿ ಸಿಂಗಾಪುರದಲ್ಲಿ ಜೆಎನ್.1 ಉಪತಳಿ ಪತ್ತೆಯಾಗಿತ್ತು. ಅವರು ಅಕ್ಟೋಬರ್ 25 ರಂದು ಸಿಂಗಾಪುರಕ್ಕೆ ಭೇಟಿ ನೀಡಿದ್ದರು. ತಿರುಚಿರಾಪಳ್ಳಿ ಜಿಲ್ಲೆ ಅಥವಾ ತಮಿಳುನಾಡಿನ ಇತರ ಪ್ರದೇಶಗಳಲ್ಲಿ ಈ ರೂಪಾಂತರಕ್ಕೆ ಸಂಬಂಧಿಸಿರುವ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ.
JN.1 ಉಪತಳಿಯು ಹಿಂದಿನ ಉಪತಳಿಗಳ ಲಕ್ಷಣವನ್ನೇ ಹೊಂದಿದೆ. JN.1 ಸಬ್‌ವೇರಿಯಂಟ್‌ನ ಬಹುಪಾಲು ರೂಪಾಂತರಗಳು ಸ್ಪೈಕ್ ಪ್ರೋಟೀನ್‌ನಲ್ಲಿ ಕೇಂದ್ರೀಕೃತವಾಗಿರುತ್ತವೆ. ಇದು ಸೋಂಕನ್ನು ತೀವ್ರಗೊಳಿಸುತ್ತದೆ.