Recent Posts

Monday, January 20, 2025
ಸುದ್ದಿ

ನಿಮ್ಮೊಳಗೂ “ಆತ್ಮ” ಇದೆ ಎಂದು ನಂಬಿದ್ದರೆ, ಆ ಆತ್ಮದ ತೂಕ ಎಷ್ಟು ಗೊತ್ತಾ?- ಅಮೇರಿಕಾ ಮೂಲದ ವಿಜ್ಞಾನಿಯಿಂದ ಬಹಿರಂಗವಾಗಿದೆ “ಆತ್ಮ”ದ ತೂಕ – ಕಹಳೆ ನ್ಯೂಸ್

ಪ್ರಪಂಚದ ಹಲವು ಧರ್ಮಗಳ ಮತ್ತು ತತ್ತ್ವಶಾಸ್ತ್ರ ಪದ್ಧತಿಗಳ ಪ್ರಕಾರ ಆತ್ಮವು ಜೀವನದ ನಿರಾಕಾರ ಚೈತನ್ಯವೆಂದು ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ಆತ್ಮವು ಚಿರಂತನವೆಂದು ಎಲ್ಲಾ ಪದ್ಧತಿಗಳು ನಂಬುತ್ತವೆಯಾದರೂ ಬೇರೆ ಬೇರೆ ಪದ್ಧತಿಗಳಲ್ಲಿ ಮೃತ್ಯುವಿನ ನಂತರ ಆತ್ಮದ ವಿಧಿಯೇನೆಂದು ಬೇರೆ ಬೇರೆ ಅಭಿಪ್ರಾಯಗಳನ್ನು ಹೇಳುತ್ತವೆ.

ಆದರೆ ದೇಹವನ್ನು ಆತ್ಮವು ಬಿಟ್ಟು ಹೋದಾಗ ಆ ವ್ಯಕ್ತಿಯ, ಭೂಮಿಯ ಮೇಲಿನ ದಿನಗಳು ಕೊನೆಗೊಂಡಂತೆ ಎನ್ನುವುದು ಕಟು ಸತ್ಯ!! ವಿಶ್ವದ ಪ್ರತಿಯೊಂದು ಧರ್ಮದಲ್ಲಿ ಆತ್ಮದ ಬಗ್ಗೆ ನಂಬಿಕೆ ಇದೆಯಾದರು ಆತ್ಮದ ಬಣ್ಣವಾಗಲಿ, ಗಾತ್ರವಾಗಲಿ ಇನ್ನೂ ಆಗೋಚರ!! ಆದರೆ ಆತ್ಮಕ್ಕೂ ಇಂತಿಷ್ಟೇ ತೂಕವಿದೆ ಅನ್ನೋದನ್ನು ಅಮೇರಿಕಾ ಮೂಲದ ವಿಜ್ಞಾನಿಯೊಬ್ಬರು ಆತ್ಮದ ತೂಕವನ್ನು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ.
ಹೌದು!! ದೇಹ ಹಾಗೂ ಆತ್ಮ ಎರಡೂ ಒಂದನ್ನೊಂದು ಹೊಂದಿಕೊಂಡಿದೆಯಲ್ಲದೇ ಆತ್ಮವಿಲ್ಲದ ದೇಹವಿಲ್ಲ, ದೇಹವಿಲ್ಲದೆ ಆತ್ಮವಿಲ್ಲವೆನ್ನಬಹುದು. ಆತ್ಮವನ್ನು ನೋಡಿದವರು ಯಾರೂ ಇಲ್ಲದಿದ್ದರೂ ದೇಹವು ಆತ್ಮದ ಅನತಿಯಂತೆ ನಡೆಯುತ್ತದೆಯಲ್ಲದೇ ಜೀವನದಲ್ಲಿ ನಾವು ಮುಂದುವರಿಯಲು, ಯಾವುದೇ ರೀತಿಯ ಕೆಲಸಕಾರ್ಯಗಳನ್ನು ಮಾಡಲು ಆತ್ಮದ ಶಕ್ತಿಯೇ ಪ್ರಮುಖವಾಗಿದೆ. ಹಾಗಾಗಿ ಆತ್ಮವು ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನೂ ಪ್ರವೇಶಿಸಬಹುದು. ಆದರೆ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಸೇರುವ ಈ ಆತ್ಮದ ತೂಕ ಎಷ್ಟು ಗೊತ್ತೇ? ಗೊತ್ತಾದರೆ ಒಂದು ಕ್ಷಣ ಅಚ್ಚರಿಯಾಗುವುದಂತೂ ಗ್ಯಾರೆಂಟಿ!!
ಅಮೇರಿಕಾ ದೇಶದ ವಿಜ್ಞಾನಿಯೋರ್ವರು, “ಮನುಷ್ಯನಿಗೆ ಆತ್ಮವಿರುತ್ತದೆ, ಅದರ ತೂಕ 21 ಗ್ರಾಂ ಇದೆ” ಎಂದು ತಾವು ನಡೆಸಿದ ಸಂಶೋಧನೆಯ ಮೂಲಕ 1907ರಲ್ಲಿ ಬಹಿರಂಗಪಡಿಸಿದ್ದಾರೆ!! ಆದರೆ ಬಹಳಷ್ಟು ಮಂದಿ ವಿಜ್ಞಾನಿಗಳು ಈ ವಿಚಾರವನ್ನು ವಿರೋಧಿಸಿದರೂ ಕೂಡ ಅದನ್ನು ವೈಜ್ಞಾನಿಕವಾಗಿ ಸುಳ್ಳೆಂದು ನಿರೂಪಿಸುವಲ್ಲಿ ವಿಫಲರಾಗಿದ್ದಾರೆ. ಹೌದು, ಅಮೇರಿಕಾದ ಮೆಕ್ ಡಗೆಲ್ ಎಂಬ ವಿಜ್ಞಾನಿಯು, 1907ರಲ್ಲಿ ಮರಣ ಶಯ್ಯೆಯಲ್ಲಿ ಮಲಗಿದ್ದ ವ್ಯಕ್ತಿಯ ಹಾಸಿಗೆಗೆ ತೂಕ ಮಾಡುವ ಸಾಧನವನ್ನು ಅಳವಡಿಸಿ ಆತ್ಮದ ತೂಕವನ್ನು ಕಂಡು ಹಿಡಿದಿದ್ದಾರೆ!!
ರೋಗಿ ಸಾಯುವುದಕ್ಕೂ ಕೆಲವು ನಿಮಿಷಗಳ ಮುಂಚೆ ಆತನ ತೂಕವನ್ನು, ಅದೇ ರೀತಿ ಆತ ಸತ್ತ ನಂತರದ ತೂಕವನ್ನು ನೋಡಿದಾಗ ಈ ಎರಡೂ ತೂಕಗಳ ನಡುವೆ 25 ಗ್ರಾಂ ಗಳಷ್ಟು ವ್ಯತ್ಯಾಸವಿರುವುದಾಗಿ ತಿಳಿಯಿತು. ಕಡಿಮೆಯಾದ 21 ಗ್ರಾಂ ತೂಕವನ್ನೇ ಮನುಷ್ಯನ ಆತ್ಮದ ತೂಕವೆಂದು ಪ್ರಕಟಿಸಿದ. ಆದರೆ ಡಗೆಲ್ ಪ್ರತಿಪಾದಿಸಿದ್ದನ್ನು ಅನೇಕ ಡಾಕ್ಟರ್ ಗಳು ಒಪ್ಪಿಕೊಳ್ಳಲಿಲ್ಲ. ಅಷ್ಟೇ ಅಲ್ಲದೇ, ಮನುಷ್ಯ ಸತ್ತ ನಂತರ ಆತನ ಶ್ವಾಸ ಕ್ರಿಯೆ ನಿಂತು ಹೋಗುತ್ತದೆಯಲ್ಲದೇ ಹೃದಯ, ಶ್ವಾಸಕೋಶಗಳು ನಿಷ್ಕ್ರಿಯಗೊಳ್ಳುತ್ತವೆ. ಇನ್ನೂ ಶರೀರದ ಒಳಗೆ ಜರುಗುವ ಅನೇಕ ಪ್ರಕ್ರಿಯೆಗಳು ನಿಂತುಹೋಗುತ್ತವೆ. ಹೀಗಾಗಿ ಸತ್ತ ಮನುಷ್ಯನ ತೂಕದಲ್ಲಿ 21 ಗ್ರಾಂ ವ್ಯತ್ಯಾಸ ಕಂಡು ಬರುತ್ತದೆ ಎನ್ನುವುದು ಡಾಕ್ಟರ್ ಗಳ ವಾದವಾಗಿದೆ.
ಆದರೆ ಈ ಬಗ್ಗೆ ಮೆಕ್ ಡಗೆಲ್ ನಾಯಿಗಳ ಮೇಲೆ ತನ್ನ ಪ್ರಯೋಗವನ್ನು ನಡೆಸಿದ. ಸಾಯುವುದಕ್ಕೆ ಮುಂದಿನ ಹಾಗೂ ಸತ್ತ ನಂತರದ ತೂಕಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದು ನಿರೂಪಿಸಿದ. ಅಂದರೆ ಆತ್ಮವೆಂಬುದು ಕೇವಲ ಮನುಷ್ಯರಲ್ಲಿ ಮಾತ್ರ ಇರುತ್ತದೆ. ಹಾಗಾಗಿ ಮನುಷ್ಯ ಸತ್ತ ನಂತರದ ತೂಕದಲ್ಲಿ 21 ಗ್ರಾಂಗಳ ವ್ಯತ್ಯಾಸ ಇರುತ್ತದೆಂದು ತಿಳಿಸಿದ. ಅಲ್ಲದೆ, ಶ್ವಾಸ ಕ್ರಿಯೆ ನಿಂತ ಮೇಲೆ ಒಂದು ನಿಮಿಷಕ್ಕೆ ಮನುಷ್ಯನ ತೂಕ 0.5 ಗ್ರಾಂ ಗಳಂತೆ ಮಾತ್ರ ಕಡಿಮೆಯಾಗುತ್ತದೆಂದು ನಿರೂಪಿಸಿದ.
ಹಾಗಾಗಿ ಈ 21 ಗ್ರಾಂ ತೂಕ “ಆತ್ಮ” ದ್ದೇ ಎಂಬುದು ಆತನ ವಾದವಾಗಿದೆ!! ಆದರೆ ವಿಜ್ಞಾನವು ಮುಂದಿನ ದಿನಗಳಲ್ಲಿ ಆತ್ಮದ ತೂಕವನ್ನು ಕಂಡುಹಿಡಿಯುವವರೆಗೂ ಆತ್ಮ ದ ತೂಕ 21 ಗ್ರಾಂ ಎಂದು ಹೇಳಬಹುದಾಗಿದೆ. ಈತನ ವಾದದಂತೆಯೇ ಆತ್ಮಕ್ಕೂ ತೂಕವಿದೆ ಎನ್ನುವುದು ಈ ಮೂಲಕ ತಿಳಿದು ಬರುತ್ತದೆ!! ಇನ್ನು, ಈ ಬಗ್ಗೆ ಬಹಳಷ್ಟು ಮಂದಿ ಡಾಕ್ಟರುಗಳು ಈ ವಿಚಾರವನ್ನು ವಿರೋಧಿಸಿದರೂ ಅದನ್ನು ವೈಜ್ಞಾನಿಕವಾಗಿ ಸುಳ್ಳೆಂದು ನಿರೂಪಿಸುವಲ್ಲಿ ವಿಫಲರಾಗಿರುವುದಂತೂ ನಿಜ.
ದೇಹ ದೀವಿಗೆಯ ಕಂಬ, ಇಂದ್ರಿಯಗಳು ಹಣತೆ, ಪ್ರಾಣವು ಎಣ್ಣೆ ಸೂಕ್ಷ್ಮದೇಹ ಬತ್ತಿ, ಬರಿಯರಿವಿನ ದೀಪವೇ ಆತ್ಮ, ಅದು ಮನಸ್ಸನ್ನು ಅರಿಯುವ ಸಾಕ್ಷಿ. ಮನಸ್ಸು ರಾಗ, ವೈರಾಗ್ಯ, ಸಂಸಾರ ಧರ್ಮ, ತತ್ತ್ವ, ಪಾಪ, ಪುಣ್ಯ, ಸುಖ, ದುಃಖ ಹೀಗೆ ಹಲವು ವ್ಯಾಪಾರಗಳಿಗೆ ಪಕ್ಕಾಗುತ್ತದೆ. ಇದನ್ನೆಲ್ಲ ಅರಿತು ಆಚರಿಸುವ ಶಕ್ತಿ ಆತ್ಮದ್ದು. ಹಾಗಾಗಿ ಮನುಷ್ಯನಿಗೆ ಆತ್ಮ ಎಂಬುವುದೇ ಇಲ್ಲ ಎಂದು ಬೊಬ್ಬಿಡುವವರಿಗೆ ಅಮೇರಿಕಾದ ಮೆಕ್ ಡಗೆಲ್ ಎಂಬ ವಿಜ್ಞಾನಿಯು ಆತ್ಮದ ಬಗ್ಗೆ ಕೆಲ ನೈಜ್ಯ ವಿಚಾರಗಳನ್ನು ಬಿಚ್ಚಿಡುವುದರೊಂದಿಗೆ ಆತ್ಮ ಎಷ್ಟು ತೂಕವಿದೆ ಎನ್ನುವುದನ್ನು ಸಂಶೋಧನೆಯ ಮೂಲಕ ಬಹಿರಂಗಪಡಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು