Friday, January 24, 2025
ಸುದ್ದಿ

ಸರ್ಕಾರಿ ಬಸ್ ಗೆ ದ್ವಿಚಕ್ರ ವಾಹನ ಡಿಕ್ಕಿ : ಬೈಕ್ ಸವಾರ ಸಾವು – ಕಹಳೆ ನ್ಯೂಸ್

ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ಕಬಕ ಸಮೀಪದ ಕೂವೆತ್ತಿಲದಲ್ಲಿ  ರಾತ್ರಿ ಸರ್ಕಾರಿ ಬಸ್ ಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಂದಿದ್ದು, ಸವಾರ ಮೃತಪಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಮೂಲದ ಅಹಮ್ಮದ್ ಆಶಿಕ್ ಅಕ್ಮಲ್ (18) ಮೃತಪಟ್ಟಿರುವಾತ. ಮಂಗಳೂರಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಸಾಧ್ಯವಾದಷ್ಟು ಎಡಬದಿಗೆ ಹೋದರೂ, ಕಬಕ ಕಡೆಯಿಂದ ಆಗಮಿಸಿದ ದ್ವಿಚಕ್ರ ವಾಹನ ಸವಾರ ಬಸ್ ಗೆ ಬಂದು ಡಿಕ್ಕಿ ಹೊಡೆದು, ಬಸ್ ಚಕ್ರ ದಡಿಗೆ ಸಿಲುಕಿದ್ದಾನೆ. ಬಸ್ ನಲ್ಲಿ ಹೆಚ್ಚಿನ ಜನ ಇದ್ದಕಾರಣ ಮತ್ತಷ್ಟು ಬದಿಗೆ ಹೋಗುವ ಸಾಹಸ ಮಾಡಿಲ್ಲ ಎಂಬುದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿದ್ದು, ಯಾವ ಭಾಗವನ್ನು ಸರಿಯಾಗಿ ಗುರುತಿಸಲಾಗದ ಸ್ಥಿತಿಯಲ್ಲಿದೆ. ಬಸ್ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹೆದ್ದಾರಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ವಾಹನದಡಿ ಸಿಲುಕಿದ ಸವಾರನನ್ನು ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದು, ಮೃತಪಟ್ಟಿರುವ ಖಚಿತವಾದ ಹಿನ್ನಲೆ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.