Recent Posts

Sunday, January 19, 2025
ಸುದ್ದಿ

ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡ ಆತ್ಮಹತ್ಯೆ – ಕಹಳೆ ನ್ಯೂಸ್

ಮಂಡ್ಯ: ಸಾಲಬಾಧೆ ತಾಳಲಾರದೆ ಜೆಡಿಎಸ್ ಮುಖಂಡರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ಮಂಗಳವಾರ ನಡೆದಿದೆ.

ಚಿಕ್ಕಗೌಡನದೊಡ್ಡಿ ನಿವಾಸಿ ಲೋಕೇಶ್(32) ಆತ್ಮಹತ್ಯೆ ಮಾಡಿಕೊಂಡವರು. ಲೋಕೇಶ್ ಮಹೀಂದ್ರ ಟ್ರ್ಯಾಕ್ಟರ್ ಶೋ ರೂಂ ನಡೆಸುತ್ತಿದ್ದರು. ಕಳೆದ ನಗರ ಸಭೆ ಚುನಾವಣೆಯಲ್ಲಿ 34ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವರ್ಣಸಂದ್ರದ ಕೈಗಾರಿಕಾ ಪ್ರದೇಶದಲ್ಲಿ ಇಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಪೂರ್ವ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಶೋ ರೂಂ ಸಲುವಾಗಿ 5 ಕೋಟಿ ರೂ ಸಾಲ ಮಾಡಿಕೊಂಡಿದ್ದರು. ಆದರೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು