Recent Posts

Sunday, January 19, 2025
ಸುದ್ದಿ

ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ – ಕಹಳೆ ನ್ಯೂಸ್

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಅದೇನೆಂದ್ರೆ ಹಾಸ್ಟೆಲ್, ವಸತಿ ಶಾಲೆ ಸೇರ ಬಯಸುವ ವಿದ್ಯಾರ್ಥಿಗಳ ಕುಟುಂಬದ ಆದಾಯ ಮಿತಿಯನ್ನು 2.50 ಲಕ್ಷ ರೂ.ಗೆ ಏರಿಸಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಹಿಂದೆ 44,000 ರೂ. ಹಾಗೂ ವಸತಿ ಶಾಲೆ ಪ್ರವೇಶಕ್ಕೆ 1 ಲಕ್ಷ ರೂ. ಆದಾಯ ಮಿತಿ ಇತ್ತು.

ಆದರೆ ಈಗ ಕುಟುಂಬದ ಆದಾಯದ ಮಿತಿಯನ್ನು 2.50 ಲಕ್ಷಕ್ಕೆ ಏರಿಕೆಯಾಗಿದ್ದು, ಈ ಬಾರಿ ಹಾಸ್ಟೆಲ್, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುವ ಸಾಧ್ಯತೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಯೋಜನೆಯಿಂದ ಇನ್ನಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್,ವಸತಿ ಶಾಲೆ ಪ್ರವೇಶ ಭಾಗ್ಯ ದೊರೆಯಲಿದೆ. ಆದಾಯ ಮಿತಿಯನ್ನು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ವಾರ್ಷಿಕ ಆದಾಯ ಮಿತಿ ಪರಿಷ್ಕರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು