Recent Posts

Friday, November 22, 2024
ಸುದ್ದಿ

ಬಂಟ್ವಾಳ : ಕುದ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ವಿವೇಕ ತರಗತಿ ಕೊಠಡಿ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನ ಬಾಳ್ತಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರಬೆಟ್ಟು ಇಲ್ಲಿ ನೂತನವಾಗಿ 13.90 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿವೇಕ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ 28ನೇ ಗುರುವಾರ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ರವರಅಧ್ಯಕ್ಷತೆಯಲ್ಲಿಜರಗಳಿರುವುದು.


ಕರ್ನಾಟಕ ವಿಧಾನ ಸಭೆಯ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘನ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ದಿನೇಶ್ ಗುಂಡೂರಾವ್ ವಿವೇಕ ತರಗತಿ ಕೊಠಡಿಯ ಉದ್ಘಾಟನೆ ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸಂಸದರಾದ ವೀರೇಂದ್ರ ಹೆಗ್ಡೆ, ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯರುಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಬಿ ಎಂ ಫಾರೂಕ್, ಹರೀಶ್ ಕುಮಾರ್, ಎಸ್ ಎಲ್ ಭೋಜೆ ಗೌಡ, ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಬಂಡಾರಿ ಭಾಗವಹಿಸಲಿದ್ದು, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ ಕೆ ಅಣ್ಣು ಪೂಜಾರಿ, ಉಪಾಧ್ಯಕ್ಷರಾದ ರಂಜಿನಿ, ಮಾಜಿ ಸಚಿವರುಗಳಾದ ರಮನಾಥ ರೈ,ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಲತೇಶ್, ಮಮತಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ನೋಣಯ್ಯ ನಾಯ್ಕ, ಕ್ಷೇತ್ರ ಸಮನ್ವಯ ಅಧಿಕಾರಿ ರಾಘವೇಂದ್ರ ಬಲ್ಲಾಳ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾ, ಶಿಕ್ಷಣ ಸಂಯೋಜಕರಾದ ಸುಜಾತ ಕುಮಾರಿ, ಪ್ರತಿಮಾ ವೈ ವಿ, ಸುಧಾ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್, ಮೊದಲಾದವರು ಗೌರವ ಉಪಸ್ಥಿತಇರಲಿದ್ದು, ವಿಶೇಷ ಅವ್ವಾನಿತರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕಮಲಾಕ್ಷಿ ಕೆ ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ವಿಜಯ ವಿ ಪ್ರಭು, ಮಾಜಿ ತಾಲೂಕು ಪಂಚಾಯತ್ ಸದಸ್ಯರುಗಳಾದ ಲಕ್ಷ್ಮಿ ಗೋಪಾಲ್ ಆಚಾರ್, ದಿನೇಶ್ ಅಮ್ಮ್ಟೂರ್, ಮೋಹನ್ ಪಿಎಸ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವರಾಜ್ ಶೆಟ್ಟಿ, ಅಶೋಕ್, ಮಲ್ಲಿಕಾ ಏನ್ ಎಂ, ಚಂದ್ರಶೇಖರ್ ಪೂಜಾರಿ, ಜ್ಯೋತಿ ಎಸ್ ನಾಯಕ್, ಚೈತ್ರ, ಕುಮಾರಿ ಹಿರಣ್ಮಯಿ, ಶೋಭಾ ಎನ್, ಆನಂದ ಶೆಟ್ಟಿ, ರಾಜೀವ, ಹರಿಣಾಕ್ಷಿ, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರ್ ನ ಮನೋಜ್ ಕುಮಾರ್ ಕಟ್ಟೆಮಾರ್, ಕೇಟಿ ಹೋಟೆಲ್ ರಾಜೇಂದ್ರ ಏನ್ ಹೊಳ್ಳ, ಶಾಲಾ ಮಹಾ ಪೋಷಕರು ಆದ ಶುಕುರ್ ಸಾಹೇಬ್, ಸಾಲಿಯನ್ ಅರ್ಥ ಮೂವರ್ಸನ ಯೋಗೀಶ್ ಸಾಲಿಯನ್, ಹೋಟೆಲ್ ಲಕ್ಷ್ಮಿ ನಿವಾಸ್ ಕಲ್ಲಡ್ಕ ದ ಶ್ರೀನಿವಾಸ ಹೊಳ್ಳ, ಇಂಜಿನಿಯರ್ ನಾಗೇಶ್ ಮೊದಲಾದವರು ಭಾಗವಹಿಸಲಿರುವರು. ಕೊಠಡಿ ಉದ್ಘಾಟನೆ, ಸಭಾ ಕಾರ್ಯಕ್ರಮದಲ್ಲಿ ಶಾಲೆಗೆ ಸಹಕಾರ ನೀಡಿದ ದಾನಿಗಳಿಗೆ ಅಭಿನಂದನ ಕಾರ್ಯಕ್ರಮ,ಬಳಿಕ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಂದ, ಮಕ್ಕಳ ಪೋಷಕರಿಂದ ಮತ್ತು ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ಕುದ್ರೆಬೆಟ್ಟು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಠಲ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು