Sunday, January 19, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ಮುದ್ದಾದ ಮಗುವಿಗೆ ನಾಮಕರಣ ಮಾಡಿದ ಕಿರುತೆರೆ ನಟಿ ರಾಧಿಕಾ ರಾವ್‌.! – ಕಹಳೆ ನ್ಯೂಸ್

ಮಂಗಳೂರು : ಮಂಗಳೂರ್ ಹುಡ್ಗಿ ಹುಬ್ಬಳ್ಳಿ ಹುಡ್ಗ ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದ ನಟಿ ರಾಧಿಕಾ ರಾವ್‌, ಇದೀಗ ಇವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ನಟಿ ರಾಧಿಕಾ ಜುಲೈನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ರಾವ್ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇದೀಗ ಮುದ್ದಾದ ಮಗುವಿಗೆ ರಾಧಿಕಾ ನಾಮಕರಣ ಮಾಡಿ,ಸೋಷಿಯಲ್‌ ಮಿಡಿಯಾದಲ್ಲಿ ಚೆಂದದ ಫೋಟೋಶೂಟ್ ಶೇರ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿರುತೆರೆಯ ನಟಿ ರಾಧಿಕಾ ರಾವ್ ಕೆಲ ತಿಂಗಳುಗಳ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದವರು, ಇದೀಗ ಮಗನ ಹೆಸರನ್ನ ನಟಿ ರಿವೀಲ್ ಮಾಡಿದ್ದಾರೆ. ರಾಧಿಕಾ ಮಗುವಿನ ಕ್ಯೂಟ್‌ ಫೋಟೋ ಹಂಚಿಕೊಳ್ಳುವುದರ ಜೊತೆಗೆ ಮಗನಿಗೆ ‘ಅಗಸ್ತ್ಯ’ ಎಂದು ನಾಮಕರಣ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ರಾಧಿಕಾ ರಾವ್ 2020ರಲ್ಲಿ ಆಕರ್ಷ್ ಭಟ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿ, ಬಳಿಕ ಇಬ್ಬರ ಮನೆಯಲ್ಲೂ ಪ್ರೀತಿಸಿದ ವಿಚಾರ ತಿಳಿಸಿ ಕುಟುಂಬದವರ ಸಮ್ಮತಿ ಪಡೆದು ಮದುವೆ ಆಗಿದ್ದರು.

ನಟಿ ರಾಧಿಕಾ ರಾವ್‌ ‘ಮಂಗಳೂರ್ ಹುಡ್ಗಿ ಹುಬ್ಬಳ್ಳಿ ಹುಡ್ಗ’, ʻರಾಧಾ ಕಲ್ಯಾಣʼ ಸೀರಿಯಲ್, ಸಾಕಷ್ಟು ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದಾರೆ. ಈ ನಟಿ ಸೀರಿಯಲ್‌ಗಳಲ್ಲಿ ಮಾತ್ರವಲ್ಲದೆ ʻಎಲ್ಲಿದ್ದೆ ಇಲ್ಲಿ ತನಕʼ ಸಿನಿಮಾದಲ್ಲೂ ಸಹ ಕಾಣಿಸಿಕೊಂಡಿದ್ದರು. ಮದುವೆ, ಸಂಸಾರ ಎಂದು ಬಣ್ಣದ ಲೋಕದಿಂದ ದೂರ ಸರಿದಿದ್ದ ನಟಿ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ. ಸೂಕ್ತ ಕಥೆ ಸಿಕ್ಕರೆ ಯಾವ ಭಾಷೆಯಾದ್ರೂ ನಟಿಸೋದಾಗಿ ತಿಳಿಸಿದ್ದಾರೆ.