Sunday, January 19, 2025
ರಾಜಕೀಯರಾಷ್ಟ್ರೀಯಸುದ್ದಿ

ಜ್ಞಾನವಾಪಿ ಮಸೀದಿ ಜಾಗದಲ್ಲಿ ಮಂದಿರ : ಮುಸ್ಲಿಂರು ಸಲ್ಲಿಸಿದ್ದ ಅರ್ಜಿ ವಜಾ – ಕಹಳೆ ನ್ಯೂಸ್

ಲಖನೌ: ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Masjid) ಇರುವ ಜಾಗದಲ್ಲಿ ಹಿಂದೂ ಪೂಜಾಮಂದಿರವನ್ನು ಮರುಸ್ಥಾಪಿಸಲು ಕೋರಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್ (Allahabad High court) ಅಸ್ತು ಎಂದಿದೆ. ಈ ಅರ್ಜಿಯ ವಿಚಾರಣೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮುಸ್ಲಿಮರ ಐದು ಅರ್ಜಿಗಳನ್ನು ವಜಾ ಮಾಡಿದೆ.

ಇದು ಮುಸ್ಲಿಂ ಅರ್ಜಿದಾರರ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ. ಜ್ಞಾನವಾಪಿ ಮಸೀದಿ (Gyanvapi Mosque) ಇರುವ ಸ್ಥಳದಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸುವ ಕುರಿತು ವಾರಾಣಸಿ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿದ್ದ ಎಲ್ಲಾ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಈ ತೀರ್ಪಿನೊಂದಿಗೆ ನ್ಯಾಯಾಲಯವು 1991ರ ಪ್ರಕರಣದ ವಿಚಾರಣೆಯನ್ನು ಅಂಗೀಕರಿಸಿತು. ಪ್ರಕರಣದ ವಿಚಾರಣೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಲು ವಾರಣಾಸಿ ನ್ಯಾಯಾಲಯಕ್ಕೆ ಆದೇಶಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು

“ಇದು ಅಲಹಾಬಾದ್ ಹೈಕೋರ್ಟ್‌ನ ಈ ಕುರಿತ ಎರಡನೇ ತೀರ್ಪು. ಈ ತೀರ್ಪು ಸರಿಯಾಗಿದೆ. ಈ ಸನ್ನಿವೇಶದಲ್ಲಿ ಪೂಜಾ ಸ್ಥಳದ ಕಾಯ್ದೆ ಅನ್ವಯವಾಗುವುದಿಲ್ಲ. ಒಂದು ಸ್ಥಳವು ಧಾರ್ಮಿಕ ರಚನೆಯೇ ಅಥವಾ ಅಲ್ಲವೇ ಎಂಬುದನ್ನು ಪುರಾವೆಗಳೊಂದಿಗೆ ಮಾತ್ರ ಸಾಬೀತುಪಡಿಸಬಹುದು” ಎಂದು ಹಿಂದೂ ಪರ ವಕೀಲ ಹರಿಶಂಕರ್ ಜೈನ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜ್ಞಾನವಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸಲು ವಾರಣಾಸಿ ನ್ಯಾಯಾಲಯ ಏಪ್ರಿಲ್ 8, 2021ರಂದು ನೀಡಿದ ಆದೇಶವನ್ನು ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ (AIMC) ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿದ ಅರ್ಜಿಗಳು ವಿರೋಧಿಸಿದ್ದವು.

ಡಿಸೆಂಬರ್ 8ರಂದು, ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಅರ್ಜಿದಾರರ ಮತ್ತು ಪ್ರತಿವಾದಿಗಳ ವಕೀಲರ ವಾದಗಳನ್ನು ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದ್ದರು. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವಿರುವ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ AIMC, ವಾರಣಾಸಿ ನ್ಯಾಯಾಲಯದ ಮುಂದೆ ತಂದ ಮೊಕದ್ದಮೆಯ ಸಿಂಧುತ್ವವನ್ನು ಪ್ರಶ್ನಿಸುತ್ತದೆ. ಈ ಮೊಕದ್ದಮೆಯಲ್ಲಿ, ಹಿಂದೂ ಅರ್ಜಿದಾರರು ಪ್ರಸ್ತುತ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ದೇವಾಲಯವನ್ನು ಮರುಸ್ಥಾಪಿಸಬೇಕೆಂದು ಕೋರಿದ್ದಾರೆ.

ಹಿಂದೂ ಪರವಾದ ಫಿರ್ಯಾದಿ ಪ್ರಕಾರ, ಜ್ಞಾನವಾಪಿ ಮಸೀದಿಯು ದೇವಾಲಯದ ಒಂದು ಭಾಗವಾಗಿದೆ. ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನ ಪ್ರಾಥಮಿಕ ವಾದವೆಂದರೆ, 1991ರ ಪೂಜಾ ಸ್ಥಳಗಳ ಕಾಯಿದೆ (ವಿಶೇಷ ನಿಬಂಧನೆಗಳು) ಪ್ರಕಾರ ಈ ಮೊಕದ್ದಮೆಯನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು. ಈ ಕಾಯಿದೆ 1947ರ ಆಗಸ್ಟ್ 15ರಂದು ಧಾರ್ಮಿಕ ಸ್ಥಳಗಳು ಹೇಗಿದ್ದವೋ ಆ ಸ್ವರೂಪವನ್ನು ಬದಲಾಯಿಸುವುದನ್ನು ನಿರ್ಬಂಧಿಸುತ್ತದೆ.

ತಗಾದೆಯ ಇತಿಹಾಸ

1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ʼಲಾರ್ಡ್ ಆದಿ ವಿಶ್ವೇಶ್ವರ ವಿರಾಜಮಾನʼ ಪರವಾಗಿ ವಿವಾದಿತ ಸ್ಥಳವನ್ನು ಹಿಂದೂಗಳಿಗೆ ಪೂಜೆಗಾಗಿ ಹಸ್ತಾಂತರಿಸುವಂತೆ ಮೊಕದ್ದಮೆ ಹೂಡಲಾಯಿತು. ಸೋಮನಾಥ ವ್ಯಾಸ್, ರಾಮನಾರಾಯಣ ಶರ್ಮಾ ಮತ್ತು ಹರಿಹರ ಪಾಂಡೆ ಅವರು ಪ್ರಕರಣಗಳನ್ನು ದಾಖಲಿಸಿದರು. 1991ರ ಪೂಜಾ ಸ್ಥಳಗಳ ಕಾಯಿದೆಯ ಪ್ರಕಾರ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗದು ಎಂದು ಮುಸ್ಲಿಂ ಕಡೆಯವರು ವಾದಿಸಿದರು. ಈ ವಿವಾದವು ಸ್ವಾತಂತ್ರ್ಯಕ್ಕೆ ಮುಂಚಿನದ್ದಾಗಿರುವುದರಿಂದ, ಪೂಜಾ ಸ್ಥಳಗಳ ಕಾಯಿದೆಯು ಜ್ಞಾನವಾಪಿ ವಿವಾದಕ್ಕೆ ಅನ್ವಯಿಸುವುದಿಲ್ಲ ಎಂದು ಹಿಂದೂ ಕಡೆಯವರು ವಾದಿಸಿದರು.

ಈಗ ವಜಾ ಆದ ಐದು ಅರ್ಜಿಗಳಲ್ಲಿ ಮೂರು, 1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿದವು. ಇನ್ನುಳಿದ ಎರಡು ಅರ್ಜಿಗಳು ಎಎಸ್‌ಐನ ಸಮೀಕ್ಷೆ ಆದೇಶದ ವಿರುದ್ಧ ಸಲ್ಲಿಸಲ್ಪಟ್ಟವು