Recent Posts

Sunday, January 19, 2025
ಸುದ್ದಿ

ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿಯಿಂದ ಹುತಾತ್ಮ ಯೋಧರ ಕುಟುಂಬಿಕರಿಗೆ ಚೆಕ್ ವಿತರಣೆ – ಕಹಳೆ ನ್ಯೂಸ್

ಮೈಸೂರು- ಹುತಾತ್ಮರಾದ ಯೋಧರ ಕುಟುಂಬಕ್ಕೆ ಇನ್ಫೊಸಿಸ್ ವತಿಯಿಂದ ತಲಾ 10ಲಕ್ಷ ರೂ ನೀಡಲಾಗಿದ್ದು, ನಿನ್ನೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹುತಾತ್ಮ ಯೋಧರ ಕುಟುಂಬಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಚೆಕ್ ವಿತರಿಸಿ ಆರು ಹುತಾತ್ಮ ಯೋಧರ ಕುಟುಂಬಿಕರಿಗೆ ಧನ ಸಹಾಯ ಮಾಡಿದರು.

ಮೈಸೂರು ತಾಲೂಕಿನ ರಮೇಶ್, ಎಚ್.ಟಿ.ಕೋಟೆ ತಾಲೂಕಿನ ಮಹೇಶ್, ಹಾಸನದ ನಾಗೇಶ್, ಯೋಗಾನಂದ್, ಸಂದೀಪ್ ಹಾಗೂ ಸಾಗರ್ ಕುಟುಂಬಿಕರು ಚೆಕ್ ಪಡೆದರು. ಬಳಿಕ ಮಾತನಾಡಿದ ಸುಧಾಮೂರ್ತಿ ಈ ಹಣವನ್ನು ಮುಂಜಿ ಮದುವೆ ಎಂದು ದುಂದುವೆಚ್ಚ ಮಾಡದೇ ಉಪಾಯದಿಂದ ಬಳಸಿ. ಪ್ರಾಣವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಹುತಾತ್ಮ ಯೋಧರ ಕುಟುಂಬದವರೊಂದಿಗೆ ನಾವಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜೆಡಿಎಸ್ ಮುಖಂಡ ಎಂ.ಜೆ.ರವಿಕುಮಾರ್,ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ದರ್ಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಕಷ್ಟ ಹೇಳಲು ಬಂದವರನ್ನು ಡ್ರಾಮ ಮಾಡ್ಬೇಡಿ ಎಂದು ಅನುಚಿತವಾಗಿ ಮಾತನಾಡಿಸಿದ್ದು, ಕಣ್ಣೀರು ಹಾಕಲು ಬಂದವರಿಗೆ ಸಾಂತ್ವನ ಹೇಳೋದು ಬಿಟ್ಟು ಡ್ರಾಮ ಮಾಡ್ಬೇಡಿ ಎಂದು ನೊಂದವರಿಗೆ ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.

ಇನ್ಫೋಸಿಸ್ ಸಂಸ್ಥೆಯಿಂದ ಮೃತ ಯೋಧರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಪಟ್ಟಿ ಸಿದ್ಧಪಡಿಸಿ ಕೊಡಲು ಸಂಸದ ಪ್ರತಾಪ್ ಸಿಂಹಗೆ ಇನ್ಫೋಸಿಸ್ ಕಂಪನಿ ಸೂಚಿಸಿತ್ತು. ಹತ್ತು ಲಕ್ಷ ನೀಡಲು ಖುದ್ದು ಆರು ಜನರ ಹೆಸರು ಸಿದ್ಧಪಡಿಸಿದ್ದರು. ಈ ವೇಳೆ ಸುಧಾಮೂರ್ತಿಯವರನ್ನು ಭೇಟಿಯಾಗಲು ಬಂದವರ ಬಳಿ ಸಂಸದ ಪ್ರತಾಪ್ ಈ ರೀತಿಯಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.