ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಿ.23ರಂದು “ಸಾಂಸ್ಕೃತಿಕ ಸಮನ್ವಯ -2023 ವರ್ಷದ ಹರ್ಷ” ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು: ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಿ.23ರಂದು “ಸಾಂಸ್ಕೃತಿಕ ಸಮನ್ವಯ -2023 ವರ್ಷದ ಹರ್ಷ” ಕಾರ್ಯಕ್ರಮ ನಡೆಯಲಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೊಂಕೋಡಿ ಅವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೈತ ಬಂಧು ಇದರ ಮಾಲಕ ಶಿವಶಂಕರ ನಾಯಕ್, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಪುತ್ತೂರು ಯು.ಆರ್. ಪ್ರಾಪರ್ಟಿಸ್ ನ ಮಾಲಕ ಹಾಗೂ ಹಿರಿಯ ವಿದ್ಯಾರ್ಥಿ ಉಜ್ವಲ್ ಕುಮಾರ್ ಪ್ರಭು, ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಶ್ರೀಮತಿ ಮೋಹಿನಿ ದಿವಾಕರ , ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.