Recent Posts

Monday, January 20, 2025
ಸುದ್ದಿ

ಬಿಲ್ಲವ ಸಮಾಜ ಸೇವಾ ಸಂಘ (ರಿ)ಕಲ್ಲಡ್ಕ ವಲಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮದಿನಾಚರಣೆ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ; ಗೋಳ್ತಮಜಲು, ಬಾಳ್ತಿಲ,ವೀರಕಂಬ, ಅಮ್ಮ್ಟೂರು, ಬೋಳಂತೂರು, ಬೊಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ)ಕಲ್ಲಡ್ಕ ವಲಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮ ದಿನಾಚರಣೆ ಕಾರ್ಯಕ್ರಮ 24 ನೇ ಆದಿತ್ಯವಾರ ಪದ್ಮಾವತಿ ಕಲ್ಯಾಣ ಮಂಟಪ ಕಲ್ಲಡ್ಕದಲ್ಲಿ ನಡೆಯಲಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ರುಕ್ಮಯ ಪೂಜಾರಿ ಏಳ್ತೀಮಾರ್ ವೈಸಳಿದ್ದು, ಮುಖ್ಯ ಅತಿಥಿಗಳಾಗಿ ಕುದ್ರೋಳಿ ಗೋಕರ್ನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಅರ್, ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ದ ಅಧ್ಯಕ್ಷರಾದ ಸಂಜೀವ ಪೂಜಾರಿ, ಬಂಟ್ವಾಳ ಹಿರಿಯ ಮೋಟರ್ ವಾಹನ ನಿರೀಕ್ಷಕರಾದ ಚರಣ್ ಕೆ, ಉದ್ಯಮಿ ಲೋಕೇಶ್ ಪೂಜಾರಿ ನರಹರಿನಗರ, ಉದ್ಯಮಿ ಮಂಜುನಾಥ ಮುಲಾರು, ಉದ್ಯಮಿ ಮಿಥುನ್ ಪೂಜಾರಿ ಹೊಸಮನೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್ ತೋಟ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಕೆ ಅಣ್ಣು ಪೂಜಾರಿ, ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮ ಪುರುಷೋತ್ತಮ, ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ ಬಾಯಿಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ನೀರಪಾದೆ ಅಧ್ಯಕ್ಷ ನಾರಾಯಣ ಪೂಜಾರಿ ನಿದ್ಯೆ , ಅಮ್ಮ್ಟೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶರತ್ ಕುಮಾರ್, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಸುರೇಶ್ ಮೊದಲಾದವರು ಭಾಗವಹಿಸಲಿದ್ದು, ಶ್ರೀ ನಾರಾಯಣ ಗುರುಪೂಜೆ ಹಾಗೂ ಶ್ರೀ ಶಾರದಾಂಬ ಭಜನಾ ಮಂದಿರ ಶೃಂಗ ಗಿರಿ ಗುಂಡಿ ಮಜಲು ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನೆರವೇರಲಿದ್ದು.ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಲ್ಕಡ್ಕ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳಕೊಡಿ ತಿಳಿಸಿರುತ್ತಾರೆ. .

ಜಾಹೀರಾತು
ಜಾಹೀರಾತು
ಜಾಹೀರಾತು