ಬಂಟ್ವಾಳ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜೀಪ ನಡು ನಿವಾಸಿ ಸೋಡಾ ಆದಮ್ ಅವರ ಪುತ್ರ ಅಜೀಜ್ (23) ಬಂಧಿತ ಆರೋಪಿ. ಗುಡ್ಡೆ ಅಂಗಡಿ ಯ ಶಾರದ ರ‍್ವೀಸ್ ಸ್ಟೇಷನ್ ನ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಪೋಲೀಸರು ಬಂಧಿಸಿದ್ದಾರೆ. ಆ.11 ರಂದು ರಾತ್ರಿ ರ‍್ವೀಸ್ ಸ್ಟೇಷನ್ ನಿಂದ ಬೈಕ್ ಕಳವಾಗಿದ್ದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇಂದು ಬೆಳಿಗ್ಗೆ ಬಿಸಿರೋಡಿನ ಭಂಡಾರಿ ಬೆಟ್ಟು ಎಂಬಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಸಂಶಯದ ಮೇಲೆ ಅಜೀಜ್ ನ ವಿಚಾರಣೆ ನಡೆಸಿದಾಗ ಈತ ಬೈಕ್ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂತು.
ಈತನ ವಿರುದ್ಧ ಈ ಹಿಂದೆ ಆಡು ಕಳವು ಮಾಡಿದ ಪ್ರಕರಣ ನಗರ ಠಾಣೆಯ ಲ್ಲಿ ದಾಖಲಾಗಿದೆ. ಎಸ್.ಪಿ. ರವಿಕಾಂತೇಗೌಡ ಮತ್ತು ಬಂಟ್ವಾಳ ಎ.ಎಸ್.ಪಿ.ಹ್ರಷಿಕೇಶ್ ಸೋನಾವಣೆ ಅವರ ಮಾರ್ಗದರ್ಶನದಂತೆ ಬಂಟ್ವಾಳ ವ್ರತ್ತ ನಿರೀಕ್ಷಕ ನಾಗರಾಜ್ ಟಿ.ಡಿ. ನರ‍್ದೇಶನ ದಲ್ಲಿ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ ಹಾಗೂ ಅಪರಾಧ ವಿಭಾಗದ ಎಸ್.ಐ.ಹರೀಶ್ ಅವರ ನೇತೃತ್ವದಲ್ಲಿ ಎ.ಎಸ್.ಐ.ಸಂಜೀವ , ಸಿಬ್ಬಂದಿ ಗಳಾದ ಸುರೇಶ್ ಪಡಾರ್, ಜಮೀರ್, ಕುಮಾರ್ ಎಚ್.ಕೆ, ಮಲಿಕ್ , ಕರೀಂ ಹಾಗೂ ಚಾಲಕ ವಿಜಯ ಕಾರ‍್ಯಾಚರಣೆ ನಡೆಸಿದ್ದರು.