Monday, January 20, 2025
ಸುದ್ದಿ

ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವತಿಯಿಂದ ಆಧುನಿಕ ಮಾಧ್ಯಮಗಳ ಸವಾಲು ಮತ್ತು ಸಾಧ್ಯತೆಗಳ ಕುರಿತು ಸಂವಾದ ಕಾರ್ಯಕ್ರಮ ; ಶತಮಾನದ ಅಂತರದಲ್ಲಿ ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ: ಪ್ರೊ. ವಿ. ಬಿ ಅರ್ತಿಕಜೆ

ಪುತ್ತೂರು, : ಸಂವಾದ ಕಾರ್ಯಕ್ರಮಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತವೆ. ಪತ್ರಿಕೋದ್ಯಮ ವಿದ್ಯಾರ್ಥಿಯಾದವನು ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಪತ್ರಿಕೋದ್ಯಮ ಬೆಳೆಯಬೇಕಾದರೆ ಪ್ರೋತ್ಸಾಹ ಬಹಳ ಮುಖ್ಯ” ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಹಾಗೂ ಹಿರಿಯ ಪತ್ರಕರ್ತ ಪ್ರೊ. ವಿ. ಬಿ ಅರ್ತಿಕಜೆ ಹೇಳಿದರು.


ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯ, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ, ಐಕ್ಯೂಎಸಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಆಧುನಿಕ ಮಾಧ್ಯಮಗಳ ಸವಾಲು ಮತ್ತು ಸಾಧ್ಯತೆಗಳು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಜ್ಞಾನವನ್ನು ಸಂಪಾದನೆ ಮಾಡಬೇಕಾದರೆ ಚಿತ್ತವನ್ನು ಕೇಂದ್ರೀಕೃತವಾಗಿರಿಸಬೇಕು. ಪತ್ರಕರ್ತನಾದವನು ಜನರಿಗೆ ಮಾಹಿತಿಯ ಜೊತೆಗೆ ಮನರಂಜನೆಯನ್ನೂ ನೀಡಬೇಕು. ಸಧ್ಯ ಒಂದು ಶತಮಾನದಲ್ಲಿ ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ. ಈ ಬದಲಾವಣೆಯ ಅವಶ್ಯಕತೆಯೂ ಇದೆ. ಹಾಗಂತ ಅದೇ ನಮ್ಮ ಭವಿಷ್ಯ, ಉಳಿದವು ನಶ್ವರ ಎಂಬ ಭಾವನೆ ಮಾತ್ರ ಸಲ್ಲದು. ಈ ನಿಟ್ಟಿನಲ್ಲಿ ಪತ್ರಿಕಾಧರ್ಮವನ್ನು ಮರೆಯದೆ ಸಮಾಜ ನಿರ್ಮಾಣದ ಕಾರ್ಯ ಮಾಡಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, “ಪತ್ರಿಕೋದ್ಯಮ ಕ್ಷೇತದ ಕೆಲಸ ಸರಳವಾದದ್ದಲ್ಲ, ಅದಕ್ಕೆ ವಿಶೇಷ ಕ್ರಿಯಾಶೀಲತೆಯ ಜೊತೆಗೆ ಚಾಣಾಕ್ಯತನವೂ ಇರಬೇಕು. ವರದಿಗಾರಿಕೆ, ಟಿವಿ ಕಾರ್ಯಕ್ರಮ ನಿರ್ಮಾಣದ ಪ್ರಕ್ರಿಯೆ ತರಬೇತಿಯನ್ನು ನೀಡುವುದಕ್ಕೆ ಮಾಧ್ಯಮ ಶಿಕ್ಷಣದಿಂದ ಸಾಧ್ಯ. ಪ್ರಸ್ತುತ ಪತ್ರಿಕೋದ್ಯಮದಲ್ಲಿ ಸಾಧ್ಯತೆಗಳು ಕೆಲವಾದರೆ ಸವಾಲುಗಳು ಹಲವಿರುತ್ತದೆ. ಈಗಿನ ಯುವ ಜನತೆ ಇಂತಹ ಸವಾಲುಗಳನ್ನು ಎದುರಿಸುವ ಧೈರ್ಯವಂತ ಪತ್ರಕರ್ತರಾಗಬೇಕು. ಅದರ ಜೊತೆಗೆ ಸಮಾಜದ ಜನರಿಗೆ ಸಹಾಯವಾಗುವ ಕೆಲಸವನ್ನು ಮಾಡಬೇಕು” ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಧರ್ ಎಚ್. ಜಿ. ಪ್ರಸ್ತಾವಿಕವನ್ನಾಡಿದರು. ಪುತ್ತೂರು ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಡೀನ್ ಡಾ. ವಿಜಯಸರಸ್ವತಿ ಬಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಪ್ರಿಯ ಉಡುಪ ಸ್ವಾಗತಿಸಿ, ಉಪನ್ಯಾಸಕ ಅಕ್ಷಯ್ ರೈ ವಂದಿಸಿದರು. ವಿದ್ಯಾರ್ಥಿನಿ ಕೃತಿಕ ಸದಾಶಿವ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಚಟುವಟಿಕೆಗಳ ಲೇಖನಗಳನ್ನೊಳಗೊಂಡ ವಿಕಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಆಧುನಿಕ ಮಾಧ್ಯಮಗಳ ಸವಾಲು ಮತ್ತು ಸಾಧ್ಯತೆಗಳ ಕುರಿತು ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾಥಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರೊಂದಿಗೆ ಸಂವಾದ ಕಾರ್ಯಕ್ರಮ ನೆರವೇರಿತು. ಸಂವಾದದಲ್ಲಿ ಸಮನ್ವಯಕಾರರಾಗಿ ಅಡಿಕೆ ಪತ್ರಿಕೆಯ ಉಪಸಂಪಾದಕ ನಾ. ಕಾರಂತ ಪೆರಾಜೆ, ಸಂವಾದದಲ್ಲಿ ಪುತ್ತೂರು ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ, ವಿಜಯ ಕರ್ನಾಟಕದ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ, ಹೊಸದಿಗಂತದ ವರದಿಗಾರ ಉದಯಕುಮಾರ್ ಯು. ಎಲ್, ರಾಜ್ ಟಿ.ವಿ ವರದಿಗಾರ ಶರತ್ ಕುಮಾರ್ ಪಾಲ್ಗೊಂಡಿದ್ದರು.