ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂಧನಾ ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ೧೯ರಂದು ವಿವಿಧ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಸಾಧನೆೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂಧನಾಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಶುವೈದ್ಯರು ಹಾಗೂ ಪುತ್ತೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಡಾ| ಕೃಷ್ಣಭಟ್‌ಕೊಂಕೋಡಿಮಾತನಾಡುತ್ತಾ, “ಶಿಕ್ಷಣವು ನಾಳಿನ ಭವಿಷ್ಯರೂಪಿಸಲು ಸಹಕಾರಿಯಾಗಿದೆ.ಸಂವೇದನೆ ಮತ್ತುಆತ್ಮವಿಶ್ವಾಸ ಶಿಕ್ಷಣದ ಜೀವಾಳ.ಇವÉರಡನ್ನೂ ಈ ಶಾಲೆಯಲ್ಲಿಕಂಡಿದ್ದೇನೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿ ರಾಷ್ಟçಮಟ್ಟದಲ್ಲಿಯೂ ಸಾಧನೆ ಮಾಡಿರುವುದುಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಸಾಧಕನಾಗುವವನು ಭೋಗದಕಡೆಗೆ ಗಮನ ಕೊಡದೆಗುರಿಯತ್ತ ಗಮನ ಹರಿಸಿ, ಎಷ್ಟೇ ಕಷ್ಟ ದುಃಖಗಳ ಮಧ್ಯೆಯು ಸಾಧಿಸುವಛಲವನ್ನು ಬಿಡದೆ ಮುನ್ನುಗ್ಗಿ.ಇದೇರೀತಿಯಇನ್ನೂ ಹೆಚ್ಚಿನ ಸಾಧನೆಗಳು ಮಾಡಿ ವಿದ್ಯಾಸಂಸ್ಥೆಗೆ, ಗುರುಹಿರಿಯರಿಗೆ, ಪೋಷಕರಿಗೂಕೀರ್ತಿತರುವಂತವರಾಗಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ೨೦೨೩-೨೪ರ ಶೈಕ್ಷಣಿಕ ವರ್ಷದಲ್ಲಿಕ್ರೀಡೆ, ಗಣಿತ, ವಿಜ್ಞಾನ ಹಾಗೂ ಕಲಾಕ್ಷೇತ್ರದಲ್ಲಿತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದಪ್ರತಿಭಾವಂತವಿದ್ಯಾರ್ಥಿಗಳಿಗೆ ಮಾತೃಸ್ವರೂಪಿಣಿಡಾ| ಕಮಲಾ ಪ್ರಭಾಕರ್ ಭಟ್, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಸುಧಾಕಶೆಕೋಡಿ, ಲಕ್ಷಿö್ಮರಘುರಾಜ್ ಆರತಿಬೆಳಗಿ, ಅಕ್ಷತೆ ಹಾಕಿ, ಸಿಹಿನೀಡಿ ಆರ್ಶೀವದಿಸಿದರು.ಇದೇ ವೇಳೆ ರಾಜ್ಯಮಟ್ಟದಕಬಡ್ಡಿಪಂದ್ಯಾಟದಲ್ಲಿ ವಿಜೇತರಾಗಿ ಶಾಲೆಯಕೀರ್ತಿಗೆಕಾರಣರಾದ ಕ್ರೀಡಾಪಟುಗಳಿಗೆ ತರಬೇತು ನೀಡಿದ ಶೋನಿತ್‌ರಾಜ್‌ಅವರನ್ನು ಸನ್ಮಾನಿಸಲಾಯಿತು.
ನಂತರಎಲ್ಲಾ ಸಾಧಕರಿಗೂ ಪ್ರಶಸ್ತಿ – ಪುರಸ್ಕಾರ ನೀಡಿಗೌರವಿಸಲಾಯಿತು.ಅಧ್ಯಾಪಕ ಬಾಲಕೃಷ್ಣ ಬಹುಮಾನ ಪಟ್ಟಿ ವಾಚಿಸಿದರು ಕಾರ್ಯಕ್ರಮದಲ್ಲಿ ೬ನೇ ತರಗತಿಯಧಾತ್ರಿಯಿಂದ ಪ್ರೇರಣಾಗೀತೆ ನಡೆಯಿತು. ತಬಲದಲ್ಲಿ ೫ನೇ ತರಗತಿಯಅಪ್ರಮೇಯ ಸಹಕರಿಸಿದನು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ| ಪ್ರಭಾಕರ್ ಭಟ್‌ಕಲ್ಲಡ್ಕ, ಕೋಶಾಧಿಕಾರಿಅಚ್ಯುತ್ ನಾಯಕ್, ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಆಡಳಿತ ಸಮಿತಿಯ ಸದಸ್ಯ ಕೆದಿಲ ಸುಬ್ರಹ್ಮಣ್ಯ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್‌ಎನ್, ಮಾತೃಸ್ವರೂಪಿಣಿಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದಮಲ್ಲಿಕಾ ಶೆಟ್ಟಿ, ಸುಧಾಕಶೆಕೋಡಿ, ಲಕ್ಷಿö್ಮÃರಘುರಾಜ್ ಮಂಗಳೂರು ಹಾಗೂ ಮುಖ್ಯೋಪಾಧ್ಯಾಯರವಿರಾಜ್‌ಕಣಂತೂರು ಉಪಸ್ಥಿತರಿದ್ದರು.