Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಮಂಗಳೂರಿನಲ್ಲಿ ಮಾದಕ ದ್ರವ್ಯ ಸೇವನೆ ; ಪುತ್ತೂರು ನೂಜಿಬಾಳ್ತಿಲ ಬಾಂತಾಜೆ ನಿವಾಸಿ, ಪದವಿನಂಗಡಿ ನಿವಾಸಿಯ ಬಂಧನ – ಕಹಳೆ ನ್ಯೂಸ್

ಪದವಿನಂಗಡಿ ನಿವಾಸಿ ವೈಷ್ಣವ್ (24) ಹಾಗೂ ಪುತ್ತೂರು ನೂಜಿಬಾಳ್ತಿಲ ಬಾಂತಾಜೆ ನಿವಾಸಿ ರಿತೇಶ್ ಪಿ. (22) ಬಂಧಿತ ಆರೋಪಿಗಳು.

ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಕೇಂದ್ರ ಉಪ ವಿಭಾಗದಲ್ಲಿ ರಚಿಸಲ್ಪಟ್ಟ ಆಂಟಿ ಡ್ರಗ್ ಟೀಂ ನ ಅಧಿಕಾರಿ, ಸಿಬ್ಬಂದಿಗಳು ಈ ಇಬ್ಬರು ಆರೋಪಿಗಳನ್ನು ಡಿ.19ರಂದು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ವೈಷ್ಣವ್ ಅತ್ತಾವರ ಕಟ್ಟೆಯ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಹಾಗೂ ಆರೋಪಿ ರಿತೇಶ್ ಪಿ. ಕೊಟ್ಟಾರ ಚೌಕಿ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಬಂಧಿಸಿರುವುದಾಗಿ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು