Sunday, November 24, 2024
ಸುದ್ದಿ

ಕಂಡ್ಲೂರು ರಾಮ್ಸನ್ ಸರಕಾರಿ ಪ್ರೌಢಶಾಲೆಯಲ್ಲಿ ಮಾದಕವಸ್ತು ಅರಿವು ಕಾರ್ಯಕ್ರಮ – ಕಹಳೆ ನ್ಯೂಸ್

ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರಿನಲ್ಲಿ ಶ್ರೀ ಅಜಯ್ ಕುಮಾರ್ ಶೆಟ್ಟಿ, ಸಹ ಶಿಕ್ಷಕರು ಇವರ ಅಧ್ಯಕ್ಷತೆಯಲ್ಲಿ ಪೋಲಿಸ್ ಠಾಣೆ ಕಂಡ್ಲೂರು ಇವರ ಸಹಯೋಗದೊಂದಿಗೆ ಮಾದಕ ವಸ್ತು ಅರಿವು ಕಾರ್ಯಕ್ರಮ ನೆರವೇರಿತು .

“ಮಾದಕ ವಸ್ತುಗಳ ವ್ಯಸನ ಕೇವಲ ವ್ಯಕ್ತಿತ್ವಕಷ್ವೇ ಅಲ್ಲ, ಕೌಟುಂಬಿಕ ಬದುಕನ್ನು ನಾಶ ಮಾಡಿ ,ಇಡೀ ಸಾಮಾಜಿಕ ಸ್ವಾಸ್ಥ್ಯಕ್ಕೆ ಬಹುದೊಡ್ಡ ತೊಡಕನ್ನುಂಟು ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಅರಿವು ನೀಡಿದಾಗ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಹೆಜ್ಜೆಯಾಗುತ್ತದೆ ಎಂದು ಶ್ರೀ ಪವನ್ ನಾಯಕ್ ಉಪ ನಿರೀಕ್ಷಕರು, ಪೋಲಿಸ್ ಠಾಣೆ ಕಂಡ್ಲೂರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾದಕ ವಸ್ತು ವಿರೋಧಿ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಪವನ್ ನಾಯಕ್ ಉಪ ನಿರೀಕ್ಷಕರು ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆ ಕಂಡ್ಲೂರು ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ , ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗೆ ಒಳಗಾಗಿ ಅರಳಬೇಕಾದ ಅಮೂಲ್ಯ ಜೀವ ಕಮರಿ ಕುಟುಂಬ ಮತ್ತು ಸಮಾಜಕ್ಕೆ ಹೊರೆಯಾಗಬೇಕಾಗುತ್ತದೆ.
ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಮುಖ್ಯ ಅತಿಥಿಗಳಾಗಿ , ಠಾಣೆಯ ಸಿಬ್ಬಂದಿಗಳಾದ ಶ್ರೀ ಸುಧೀರ್ ಹಾಗೂ ಶ್ರೀರಾಜು ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಜನಿ .ಎಸ್. ಹೆಗಡೆ ,ಶಿಕ್ಷಕರಾದ ,ಶ್ರೀ ಅಣ್ಣಪ್ಪ ಗೌಡ, ಶ್ರೀ ನಿತ್ಯಾನಂದ ಶೆಟ್ಟಿ ಹಳ್ನಾಡು, ಶ್ರೀಮತಿ ಲಕ್ಷ್ಮೀ ಶೆಟ್ಟಿ, ಶ್ರೀಮತಿ ಸಂಗೀತ ಕುಮಾರಿ ದಿಶಾ ಇವರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ,ಪೋಷಕರು ಉಪಸ್ಥಿತರಿದ್ದರು . ಶ್ರೀಮತಿ ರಜಿನಿ ಎಸ್ ಹೆಗಡೆ ಸ್ವಾಗತಿಸಿ ,ಶ್ರೀ ಸಂತೋμï ಕಾರ್ಯಕ್ರಮ ನಿರ್ವಹಿಸಿ , ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು