Sunday, November 24, 2024
ಸುದ್ದಿ

ಡಿ.23ರಂದು ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನವಾಗಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ “ವಜ್ರ ಸಂಭ್ರಮ -2023 ” ಕಾರ್ಯಕ್ರಮ- ಕಹಳೆ ನ್ಯೂಸ್ 

ಬಂಟ್ವಾಳ : 27.80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಗೊಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ತರಗತಿ ಕೊಠಡಿಯ ಉದ್ಘಾಟನೆ ಹಾಗೂ ಶಾಲಾ “ವಜ್ರ ಸಂಭ್ರಮ -2023 ” ಕಾರ್ಯಕ್ರಮ ಡಿ.23ರಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕರ್ನಾಟಕ ವಿಧಾನ ಸಭೆಯ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಘನ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ದಿನೇಶ್ ಗುಂಡೂರಾವ್ ವಿವೇಕ ತರಗತಿ ಕೊಠಡಿ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸಂಸದರಾದ ವೀರೇಂದ್ರ ಹೆಗ್ಡೆ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ ರೈ, ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯರುಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಬಿ ಎಂ ಫಾರೂಕ್, ಹರೀಶ್ ಕುಮಾರ್, ಎಸ್ ಎಲ್ ಭೋಜೆ ಗೌಡ, ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಗೊಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ, ಉಪಾಧ್ಯಕ್ಷ ಜಯಂತ ಮುಕ್ಕಾರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಭಿಷೇಕ್, ಸವಿತಾ, ದೀಪಕ್ ಕುಮಾರ್, ಹರಿಣಾಕ್ಷಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ, ದೈಹಿಕ ಪರಿವೀಕ್ಷಕ ವಿಷ್ಣು ನಾರಾಯಣ ಹೆಬ್ಬಾರ್, ಕ್ಷೇತ್ರ ಸಮನ್ವಯ ಅಧಿಕಾರಿ ರಾಘವೇಂದ್ರ ಬಲ್ಲಾಳ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯ ಶಂಕರ್ ಆಳ್ವಾ ಎಂ, ಶಿಕ್ಷಣ ಸಂಯೋಜಕಿ ಪ್ರತಿಮಾ ವೈ ವಿ, ಕಲ್ಲಡ್ಕ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಮೊದಲಾದವರು ಗೌರವ ಉಪಸ್ಥಿತಲಿರಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ನೆಟ್ಲ ಶಾಲಾ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ, ಸಾಯಂಕಾಲ ನೆಟ್ಲ ಹಾಗೂ ಬೊಮ್ಮನಕೋಡಿ ಅಂಗನವಾಡಿ ಪುಟಾಣಿಗಳಿಂದ, ನೆಟ್ಲ ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ ಗಂಟೆ 9:00 ರಿಂದ ಹಿರಿಯ ವಿದ್ಯಾರ್ಥಿಗಳು ಹಾಗೂ ರಂಗವಲ್ಲಿ ಕಲಾವಿದರು ನೆಟ್ಲ ಇವರಿಂದ ರಹಸ್ಯಮಯ ತುಳು ನಾಟಕ “ಗುಡ್ಡೆಡ್ ಭೂತ ಉಂಡುಗೆ ” ನಡೆಯಲಿದೆ. ಎಂದು ನೆಟ್ಲ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ತಿಳಿಸಿದ್ದಾರೆ.