ಹಿಂದೂ ಜಾಗರಣ ವೇದಿಕೆ ಮುಖಂಡ ದಿನೇಶ್ ಪಂಜಿಗ ಹಾಗೂ ಸಂಘಟನೆ ಕಾರ್ಯಕರ್ತರ ಮೇಲೆ ಗಡಿಪಾರು ನೋಟಿಸ್ ಮುರಳಿಕೃಷ್ಣ ಹಸಂತ್ತಡ್ಕ ಖಂಡನೆ – ಕಹಳೆ ನ್ಯೂಸ್
ಹಿಂದೂ ಜಾಗರಣ ವೇದಿಕೆ ಮುಖಂಡ ದಿನೇಶ್ ಪಂಜಿಗ ಹಾಗೂ ಸಂಘಟನೆ ಕಾರ್ಯಕರ್ತರ ಮೇಲೆ ಗಡಿಪಾರು ನೋಟಿಸ್ ಮಾಡಿರುವ ವಿಚಾರಕ್ಕೆ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತ್ತಡ್ಕ ಖಂಡನೆ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಮಾಜದ ಮಾನ ಬಿಂದುಗಳ ರಕ್ಷಣೆ,ಯುವಕರಲ್ಲಿ ದೇಶಭಕ್ತಿಯನ್ನು ಬೆಳೆಸುವ ರಾಷ್ಟ್ರಜಾಗೃತಿಯ ಕೆಲಸ ಹಾಗೂ ಸಮಾಜದ ಹಲವು ರೀತಿಯ ಕೆಲಸ ಕಾರ್ಯವನ್ನು ಮಾಡುತ್ತಿರುವ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಾರ್ಯಕರ್ತರಿಗೆ ರೌಡಿಗಳೆಂದು ಹಣೆಪಟ್ಟಿ ನೀಡಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲೆಯ ಪ್ರಮುಖರಾದ ದಿನೇಶ್ ಪಂಜಿಗ ಅವರ ಮೇಲೆ ಹಾಗೂ ಸಂಘಟನೆಯ ಕಾರ್ಯಕರ್ತರಾದ ಅಯ್ಯಪ್ಪ ಮಾಲೆಧಾರಿ ಪ್ರವೀಶ್ ಕುಮಾರ್ ಅವರನ್ನು ಗಡಿಪಾರಿಗೆ ತಯಾರಿ ಮಾಡುತ್ತಿರುವ ಸರಕಾರದ ತೀರ್ಮಾನ ಖಂಡನೀಯ.
ಪುತ್ತೂರುನಲ್ಲಿ ಕಳೆದ ತಿಂಗಳು ಹಲವು ತಿಂಗಳ ಹಿಂದೆ ನಡೆದ ಘಟನೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅನ್ಯಮತೀಯನಿಂದ ರಕ್ಷಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಬಜರಂಗದಳದ ಪ್ರಜ್ವಲ್,ದಿನೇಶ್,ನಿಶಾಂತ್,ಪ್ರದಿಪ್ ಎಂಬ ಯುವಕರ ಮೇಲೆ ಅ ಘಟನೆಯ ಸಂದರ್ಭ ಕೇವಲ ಒಂದು ಪ್ರಕರಣ ಇದ್ದ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ದೂರದ ಬಾಗಲಕೋಟೆಗೆ ಗಡಿಪಾರು ಮಾಡುವ ಬಗ್ಗೆ ನೋಟೀಸ್ ಹೊರಡಿಸಲಾಗಿತ್ತು ಹಾಗೂ ಸುಳ್ಯದ ಬಜರಂಗದಳ ಪ್ರಮುಖರಾದ ಲತೀಶ್ ಗುಂಡ್ಯ ಇವರ ಮೇಲೂ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದ್ದು, ಈ ರೀತಿ ಹಿಂದೂ ಯುವಕರನ್ನು ಸರಕಾರಿ ವ್ಯವಸ್ಥೆಯೆ ರೌಡಿಗಳೆಂದು ಹಣೆಪಟ್ಟಿ ನೀಡಿ ಸಮಾಜದಲ್ಲಿ ರೌಡಿಗಳೆಂದು ಬೆಳೆಸಲು ಯೋಚಿಸುತ್ತಿರುವುದು ನಾಚೀಕೆಗೆಡಿನ ಸಂಗತಿ. ಈ ರೀತಿ ಹಿಂದೂ ಸಂಘಟನೆಯನ್ನು ಮಟ್ಟ ಹಾಕಲು ಚಿಂತಿಸಿರುವ ಸರಕಾರದ ಅಡಳಿತ ವ್ಯವಸ್ಥೆಯನ್ನು ಬಲವಾಗಿ ಖಂಡಿಸುತ್ತೇವೆ. ಪೋಲೀಸ್ ಇಲಾಖೆಯನ್ನು ಸರಕಾರಿ ವ್ಯವಸ್ಥೆಯನ್ನು ಬಳಸಿಕೊಂಡು ಹಿಂದೂ ಸಂಘಟನೆಯನ್ನು ಮಟ್ಟ ಹಾಕಲು ಹೊರಟಿರುವ ನಡೆಯನ್ನು ಹಿಂದೂ ಸಮಾಜ ಖಂಡಿಸುತ್ತದೆ ಅದರಿಂದ ಹಿಂದೂ ಕಾರ್ಯಕರ್ತರ ಮೇಲೆ ಸುಖಾ ಸುಮ್ಮನೆ ಗಡಿಪಾರು ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ ಇದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಗ್ರವಾಗಿ ಖಂಡಿಸುತ್ತೇವೆ.