Sunday, January 26, 2025
ಸುದ್ದಿ

ಬೆಳ್ಳಾರೆ : ಮಹಿಳೆಗೆ ಅವಾಚ್ಯವಾಗಿ ಬೈದು, ಜಾತಿನಿಂದನೆ, ಜೀವ ಬೆದರಿಕೆ ಆರೋಪ : ಪ್ರಕರಣ ದಾಖಲು – ಕಹಳೆ ನ್ಯೂಸ್

ಬೆಳ್ಳಾರೆ : ಮಹಿಳೆಯೋರ್ವರಿಗೆ ಅವಾಚ್ಯವಾಗಿ ಬೈದು, ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮುರುಳ್ಯ ನಿವಾಸಿ ಚೋಮಣ್ಣ ನಾಯ್ಕ ಎಂಬವರು ನೀಡಿರುವ ದೂರಿನ ಮೇರೆಗೆ ತಿಮ್ಮಪ್ಪ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೋಮಣ್ಣ ನಾಯ್ಕ ಎಂಬವರ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಜಮೀನು ಹೊಂದಿದ್ದು ಆ ಜಮೀನಿನಲ್ಲಿ ಸಣ್ಣ ಹೊಟೇಲು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುತ್ತಾರೆ. ಸದ್ರಿ ಜಮೀನಿನ ಪಕ್ಕದ ಜಮೀನಿನಲ್ಲಿ ಕಟ್ಟಡವನ್ನು ಹೊಂದಿರುವ ತಿಮ್ಮಪ್ಪ ಗೌಡ ಎಂಬವರು ಚೋಮಣ್ಣ ರವರ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವ ಇರಾದೆಯಿಂದ ಈ ಹಿಂದಿನಿAದಲೂ ಕಿರುಕುಳ ನೀಡುತ್ತಿದ್ದು, ಡಿ.15 ರಂದು ತಿಮಪ್ಪ ಗೌಡ ಚೋಮಣ್ಣ ರವರ ಹೊಟೇಲ್ ಬಳಿ ಬಂದು, ಅವರ ಪತ್ನಿಯನ್ನು ಉದ್ದೇಶಿಸಿ ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿ ಕತ್ತಿ ಹಿಡಿದು ಕಡಿದು ಕೊಲ್ಲುವುದಾಗಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು