Friday, January 24, 2025
ಸುದ್ದಿ

ಹೆಜ್ಜೇನು ಕಚ್ಚಿ ಗಂಭೀರ ಗಾಯಗೊಂಡ ವೃದ್ಧ ಮೃತ್ಯು – ಕಹಳೆ ನ್ಯೂಸ್

ಕುಂದಾಪುರ : ಹೆಜ್ಜೇನು ಕಚ್ಚಿ ಗಂಭೀರ ಗಾಯಗೊಂಡಿದ್ದ ವೃದ್ಧರೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಕುಂದಾಪುರದ ಬಸ್ರೂರು ಎಂಬಲ್ಲಿ ನಡೆದಿದೆ.

ಕುಂದಾಪುರ ಬಸ್ರೂರು ಬಸ್ ನಿಲ್ದಾಣದ ಬಳಿಯ ನಿವಾಸಿಯಾಗಿರುವ ಜಗಜೀವನ್ (76) ಹೆಜ್ಜೇನು ದಾಳಿಯಿಂದ ಮೃತಪಟ್ಟವರು. ಮನೆಯಿಂದ ಬಸ್ ನಿಲ್ದಾಣದತ್ತ ಬರುತ್ತಿದ್ದಾಗ ಏಕಾಏಕಿ ಹೆಜ್ಜೇನು ಗುಂಪು ದಾಳಿ ಮಾಡಿದೆ. ಯಾವುದೋ ಪಕ್ಷಿ ಹೆಜ್ಜೇನು ಗೂಡಿಗೆ ದಾಳಿ ಮಾಡಿದಾಗ, ಗುಂಪು ಗುಂಪಾಗಿ ಎದ್ದ ಹೆಜ್ಜೇನುಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಜಗಜೀವನ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು