Saturday, January 25, 2025
ಸುದ್ದಿ

ಡಿ.30ರಂದು ವಿ. ಹಿಂ.ಪ. ಬಜರಂಗದಳ ರೆಖ್ಯ ಘಟಕದ ವತಿಯಿಂದ ರೆಖ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ 3ನೇ ವರ್ಷದ ಸಾಮೂಹಿಕ ಶನೈಶ್ವರ ವೃತ ಕಲ್ಪೋಕ್ತ ಪೂಜೆ – ಕಹಳೆ ನ್ಯೂಸ್

ಬೆಳ್ತಂಗಡಿ : ವಿಶ್ವ ಹಿಂದು ಪರಿಷತ್ ಬಜರಂಗದಳ ರೆಖ್ಯ ಘಟಕದ ವತಿಯಿಂದ ಡಿ.30ರಂದು ರೆಖ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಸುಳ್ಯ ಇವರ ಪೌರೋಹಿತ್ಯದಲ್ಲಿ 3ನೇ ವರ್ಷದ ಸಾಮೂಹಿಕ ಶನೈಶ್ವರ ವೃತ ಕಲ್ಪೋಕ್ತ ಪೂಜೆ ನಡೆಯಲಿದೆ.

ವಿಶ್ವ ಹಿಂದು ಪರಿಷತ್ ಬಜರಂಗದಳ ರೆಖ್ಯ ಘಟಕದ ಅಧ್ಯಕ್ಷರಾದ ನಿತ್ಯಾನಂದ ಕೆಲೆಂಜಿನೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ದಕ್ಷಿಣ ಪ್ರಾಂತದ ಸಹ ಸಂಯೋಜಕರಾದ ಮುರಳೀಕೃಷ್ಣ ಹಸಂತಡ್ಕ ಧಾರ್ಮಿಕ ಭಾಷಣ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜ, ವಿಶ್ವ ಹಿಂದು ಪರಿಷತ್ ಬಜರಂಗದಳ ರಾಜ್ಯ ಕಾರ್ಯಕಾರಣಿ ಸದಸ್ಯ ರಘ ಸಕಲೇಶಪುರ, ವಿಶ್ವ ಹಿಂದು ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಿಶ್ವ ಹಿಂದು ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡಾಧ್ಯಕ್ಷ ದಿನೇಶ್ ಚಾರ್ಮಾಡಿ, ರೆಖ್ಯ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಗಿರಿಯಪ್ಪ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.