Sunday, January 26, 2025
ಸುದ್ದಿ

ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಪಂಚಾಯತ್ ಕಟ್ಟಡದಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಬಂದಾರು : ಗ್ರಾಮ ಪಂಚಾಯತ್ ಬಂದಾರು ಹಾಗೂ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದೊಂದಿಗೆ ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಬಸ್ ನಿಲ್ದಾಣದ ಬಳಿ ಪಂಚಾಯತ್ ಕಟ್ಟಡದಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ನವೀನ್ ಚಂದರ್, ಸೀನಿಯರ್ ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸರ್ ಪುತ್ತೂರು ವಿಭಾಗ ಇವರು ಕಚೇರಿ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಂದಾರು ಗ್ರಾಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ ಖಂಡಿಗ ಇವರು ತಮ್ಮ ದೇಣಿಗೆಯನ್ನು ಕಳೆಂಜ ನಂದಗೋಕುಲ ಗೋಶಾಲೆಯ ಸೇವಾಶ್ರಮ ಕ್ಕೆ ನೂತನ ಕಚೇರಿಯ ಮೊದಲ ಹಣ ವರ್ಗಾವಣೆ ಮಾಡುವ ಮೂಲಕ ಚಾಲನೆ ನೀಡಿದರು. ತಮ್ಮ ನಿವೃತ್ತಿ ಜೀವಣ್ಣಕ್ಕೆ ಪಾದಾರ್ಪಣೆಗೊಳ್ಳಲಿರುವ ಪುತ್ತೂರು ವಿಭಾಗ ಸೀನಿಯರ್ ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸರ್ ಶ್ರೀ ನವೀನ್ ಚಂದರ್ ಹಾಗೂ ಸಹಕರಿಸಿದ ಶರ್ಮ, ದಿನೇಶ್ ಗೌಡ ಅಡ್ಡಾರು, ಇವರಿಗೆ ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

   

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಯಾಮಣಿ, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಬರಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಪುರುಷೋತ್ತಮ, ಶ್ರೀ ಚಂದ್ರ ನಾಯ್ಕ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಪೋಸ್ಟ್ ಆಫೀಸರ್ ಪುತ್ತೂರು ವಿಭಾಗ, ಶ್ರೀ ಮೋಹನ್ ಬಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫೀಸರ್, ಕಾರ್ಕಳ ಉಪ ವಿಭಾಗ, ಶ್ರೀ ಸುಜಯ್ ಅಂಚೆ ನಿರೀಕ್ಷಿಕರು ಬೆಳ್ತಂಗಡಿ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ, ಸದಸ್ಯರಾದ ಶ್ರೀಮತಿ ಭಾರತಿ ಕೊಡಿಯೇಲು, ಶ್ರೀಮತಿ ಅನಿತಾ ಕೆ, ಕುರುಡಂಗೆ, ಶ್ರೀಮತಿ ಸುಚಿತ್ರ ಮುರ್ತಾಜೆ, ಪೆರ್ಲ-ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಗೌಡ ಅಂಗಡಿಮಜಲು, ಉಪಾಧ್ಯಕ್ಷೆ ಶ್ರೀಮತಿ ಯಮುನಾ ಯಾನೆ ಜ್ಯೋತಿ, ಸ್ಥಾಪಕಾಧ್ಯಕ್ಷರು ಹಾಲಿ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಗೌಡ ಪಾಪುದಡ್ಕ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಮಹಾಬಲ ಗೌಡ ನಾಗಂದೋಡಿ ಇವರುಗಳು ಉಪಸ್ಥಿತರಿದ್ದರು. ಸ್ವಾಗತ ಪ್ರಾರ್ಥನೆ ಧನ್ಯವಾದ ನಿರೂಪಣೆ ನೆರವೇರಿಸಿದರು,ಆಧಾರ್ ನೋಂದಣಿ, ತಿದ್ದುಪಡಿ, ಜನಸಂಪರ್ಕ ಅಭಿಯಾನ,ಅಂಚೆ ಇಲಾಖೆಯ ನೂತನ ಖಾತೆ ಹಾಗೂ ವಿವಿಧ ಸೌಲಭ್ಯದ ಮಾಹಿತಿ ಜೊತೆಗೆ ನೋಂದಣಿ ಕಾರ್ಯದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.