Recent Posts

Monday, January 27, 2025
ಸುದ್ದಿ

ಕೆಲಿಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.30ರಂದು ಶಾಲಾ ವಾರ್ಷಿಕೋತ್ಸವ, ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ :  ವೀರಕಂಭ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜದಲ್ಲಿ ಡಿ.30ರಂದು ಶಾಲಾ ವಾರ್ಷಿಕೋತ್ಸವ, ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆಯಲಿದೆ. ಕಲ್ಲಡ್ಕ ಲಕ್ಷ್ಮಿ ಗಣೇಶ್ ಹೋಟೆಲ್ ಮಾಲಕರಾದ ರಾಜೇಂದ್ರ ಹೊಳ್ಳ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಾಯಂಕಾಲ ಸ್ಥಳೀಯ ಮಂಗಳಪದವು ಹಾಗೂ ಕೆಲಿಂಜ ಅಂಗನವಾಡಿ ಪುಟಾಣಿಗಳಿಂದ, ಶಾಲಾ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ “ಸಾಂಸ್ಕøತಿಕ ವೈವಿಧ್ಯ ” ನಡೆಯಲಿದೆ.

ಬಳಿಕ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಂಟ್ವಾಳ ಕ್ಷೇತ್ರದ ಮಾನ್ಯ ಶಾಸಕರಾದ ರಾಜೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರುಗಳಾದ ಶೀಲಾ ನಿರ್ಮಲ ವೇಗಸ್, ಸಂದೀಪ್ ಪೂಜಾರಿ, ಜಯಪ್ರಸಾದ್ ಕಲ್ಮಲೆ , ರಘು ಪೂಜಾರಿ, ಉಮಾವತಿ, ಅಬ್ದುಲ್ ರಹಿಮಾನ್ , ಆರ್ ಎಂ ಎಸ್ ಎ ವಿಟ್ಲದ ಗೌರವ ಅಧ್ಯಕ್ಷರಾದ ಸುಬ್ರಾಯ ಪೈ,ಬೆಂಗಳೂರು ಸರ್ಕಲ್ ಇನ್ಸ್ಪೆಕ್ಟರ್ ಕೆ ಎಂ ರಫಿಕ್, ಸಾಯಿ ಶೀತಲ್ ಎಂಟರ್ ಪ್ರ್ರೈಸಸ್ ರಾಯಿ ಮಾಲಕರಾದ ರೂಪ ರಾಜೇಶ್ ಶೆಟ್ಟಿ, ಕೆಲಿಂಜ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಡಿ. ಪದ್ಮನಾಭ ರಾವ್, ಪ್ರಗತಿಪರ ಕೃಷಿಕರಾದ ಸತ್ಯಸುಂದರ ಭಟ್ ಕಲ್ಮಲೆ, ಬಿಸಿ ರೋಡ್ ವಕೀಲೆ ಚೇತನ ರಾಮಚಂದ್ರ ಶೆಟ್ಟಿ, ಕಲ್ಲಡ್ಕ ಪೂರ್ಲಿಪಾಡಿ ವರಾಹ ಎಂಟರ್ ಪ್ರೈಸಸ್ ಮಾಲಕರಾದ ಯುವರಾಜ್ ನೆಕ್ಕಿಲಾರು, ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕಿ ಪ್ರತಿಮಾ ವೈ ವಿ, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ ಡಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋμï ಶೆಟ್ಟಿ ಪೆಲತಡ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಂತಿ ಮೊದಲಾದವರು ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರೆಯಲಿದ್ದು ತುಳು ಹಾಸ್ಯಮಯ ನಾಟಕ “ಬದ್ಕ್ಯೆರೆ ಕಲ್ಪುಲೆ,” ನಡೆಯಲಿರುವುದು ಎಂದು ಶಾಲಾ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್ ತಿಳಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

.

ಜಾಹೀರಾತು
ಜಾಹೀರಾತು
ಜಾಹೀರಾತು