Monday, January 27, 2025
ಸುದ್ದಿ

ಚಾಲಕ ಬ್ರೇಕ್ ಹೊಡೆದ ಪರಿಣಾಮ ರಸ್ತೆ ನಡುವಲ್ಲೇ ಅಡ್ಡ ನಿಂತ ಕಾರು : ಕಾರಿಗೆ ಲಾರಿ ಡಿಕ್ಕಿ ಕಾರು ಚಾಲಕ ಗಂಭೀರ – ಕಹಳೆ ನ್ಯೂಸ್

ಮಂಗಳೂರು:ಚಲಿಸುತ್ತಿದ್ದ ಕಾರಿನ ಚಾಲಕ ಆತುರದಿಂದ ಬ್ರೇಕ್ ಹೊಡೆದ ಪರಿಣಾಮ ಕಾರು ನಡು ರಸ್ತೆಯಲ್ಲೇ ಅಡ್ಡವಾಗಿ ನಿಂತಿದ್ದು, ಈ ಕೂಡಲೇ ರಸ್ತೆಯಲ್ಲಿ ಚಲಿಸುತ್ತಿದ್ದ 16 ಚಕ್ರದ ಲಾರಿ ಬಂದು ಡಿಕ್ಕಿ ಹೊಡೆದ ಘಟನೆ ಮಂಗಳೂರು ಪಡೀಲ್ ಫ್ಲೈ ಓವರ್ ಮುಂಭಾಗದಲ್ಲಿ ನಡೆದಿದೆ.

ಮಂಗಳೂರಿನಿಂದ ಬಿಸಿರೋಡ್‌ ಕಡೆಗೆ ಬರುತ್ತಿದ್ದ ಕಾರಿನ ಚಾಲಕ ಸಡನ್‌ ಆಗಿ ಬ್ರೇಕ್ ಹೊಡೆಡಿದ್ದು ಪರಿಣಾಮ ಕಾರು ರಸ್ತೆಗೆ ಅಡ್ಡಲಾಗಿ ನಿಂತು ಅದಕ್ಕೆ 16 ಚಕ್ರದ ಲಾರಿಯೊಂದು ಬಂದು ಡಿಕ್ಕಿ ಹೊಡೆದಿದೆ. ಕಾರು ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು