Recent Posts

Monday, January 20, 2025
ಸುದ್ದಿ

ಹಿಂದೂ ಶ್ರದ್ಧಾ ಕೇಂದ್ರಗಳನ್ನು ವ್ಯವಸ್ಥಿತವಾಗಿ ಒಡೆಯುವ ಷಡ್ಯಂತ್ರ ನಡೆಯುತ್ತಿದೆ: ಕಸ್ತೂರಿ ಪಂಜ – ಕಹಳೆ ನ್ಯೂಸ್

ಮೂಡುಬಿದಿರೆ: ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಧಕ್ಕೆ ಬಂದರೆ ಅದನ್ನು ಎದುರಿಸುವ ಶಕ್ತಿ ನಮಗಿದೆ. ತೃಪ್ತಿ ದೇಸಾಯಿಯನ್ನು ಮುಂದಿಟ್ಟುಕೊಂಡು ಹಿಂದೂ ಶ್ರದ್ಧಾ ಕೇಂದ್ರಗಳನ್ನು ವ್ಯವಸ್ಥಿತವಾಗಿ ಒಡೆಯುವ ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ಧ ನಾವು ಧ್ವನಿಯೆತ್ತಬೇಕು ಎಂದು ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

ಅವರು ಸುಪ್ರೀಂ ಕೋರ್ಟ್ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಿರುವುದನ್ನು ವಿರೋಧಿಸಿ ಮಂಗಳವಾರ ಮೂಡುಬಿದಿರೆಯ ಅಯ್ಯಪ್ಪ ಭಕ್ತರಿಂದ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಮುಖಂಡ ಸುದರ್ಶನ ಎಂ. ಶಬರಿಮಲೆ ಸಾಮಾಜಿಕ ಸಹಿಷ್ಣುತೆಯ, ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದು ಇದನ್ನು ಅಪವಿತ್ರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಶಬರಿಮಲೆಯಲ್ಲಿ ಈಗಲೂ ಮಹಿಳೆಯರಿಗೆ ಪ್ರವೇಶವಿದ್ದು ಕೆಲವು ವೈಜ್ಞಾನಿಕ ಕಾರಣಗಳಿಗಾಗಿ ನಿರ್ದಿಷ್ಟ ವಯೋಮಾನದವರಿಗೆ ಮಾತ್ರ ಪ್ರವೇಶಿಸಲು ನಿರ್ಬಂಧವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಕುಟುಂಬವನ್ನು ಸರಿಯಾಗಿಟ್ಟುಕೊಳ್ಳಲಾಗದವರು ದೇಶ, ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ನಂಬಿಕೆ, ಶ್ರದ್ಧೆ ಉಳಿಯದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. ನಮ್ಮ ಕಟ್ಟುಪಾಡುಗಳನ್ನು ಮುರಿಯದೆ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸೋಣ ಎಂದರು.

ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ಮಾತನಾಡಿ, ದೇವರನ್ನು ನಂಬುವುದು ನಮಗೆ ಶಕ್ತಿ ಮತ್ತು ಆರೋಗ್ಯ ಕರುಣಿಸಲು. ನಾವೇ ಅಶುದ್ಧವಾಗಿ ದೇವಸ್ಥಾನಕ್ಕೆ ಹೋಗುವುದು ಸರಿಯೇ? ಎಂದು ಪ್ರಶ್ನಿಸಿದರು.

ಇದಕ್ಕೂ ಮೊದಲು ಸಾವಿರ ಕಂಬದ ಬಸದಿಯಿಂದ ಬಸ್‍ನಿಲ್ದಾಣದವರೆಗೆ ನಡೆಯಿತು. ಬಳಿಕ ತಹಸೀಲ್ದಾರ್ ಕಚೇರಿಯಲ್ಲಿ ಈ ತೀರ್ಪನ್ನು ಮರು ಪರಿಶೀಲಿಸುವಂತೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.