Sunday, November 24, 2024
ಸುದ್ದಿ

ಬಿಕರ್ನಕಟ್ಟೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು : ಪದವು ಬಿಕರ್ನಕಟ್ಟೆಯ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಕೊಠಡಿಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಈ ಶಾಲೆಯ ಅಭಿವೃದ್ಧಿಗೆ ಈಗಾಗಲೇ ಸಿ.ಎಸ್.ಆರ್ ನಿಧಿಯಡಿಯಲ್ಲಿ 10 ಲಕ್ಷ ರೂ, ಪಾಲಿಕೆ ಅನುದಾನದಲ್ಲಿ ಹೈಮಾಸ್ಟ್ ದೀಪ, ತಡೆಗೋಡೆ ಕಲ್ಪಿಸಿಕೊಡಲಾಗಿದೆ. ವಿವೇಕ ಯೋಜನೆಯಡಿ 40 ಲಕ್ಷ ರೂ ಅನುದಾನದಲ್ಲಿ ಎರಡು ನೂತನ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇಂಟರ್ಲಾಕ್ ಅಳವಡಿಕೆ ಮತ್ತು ವೇದಿಕೆ ದುರಸ್ತಿಗೆ 15 ಲಕ್ಷ ರೂ ಮಂಜೂರಾಗಿದೆ. ಒಟ್ಟಾರೆಯಾಗಿ ಈ ಸರಕಾರಿ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಗೂ ಅಧಿಕ ಅನುದಾನ ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ವರ್ಷಗಳ ಹಿಂದೆ ಈ ಸರಕಾರಿ ಶಾಲೆಯಲ್ಲಿ ಕೇವಲ 68 ಮಕ್ಕಳು ಮಾತ್ರ ಇದ್ದರು. ನಂತರ ಮುಖ್ಯೋಪಾಧ್ಯಾಯನಿ ರಾಜೀವಿ ಅವರ ನೇತೃತ್ವದ ಶಿಕ್ಷಕರ ತಂಡ ಮನೆ ಮನೆಗೆ ಹೋಗಿ ಪೆÇೀಷಕರಿಗೆ ಮನವರಿಕೆ ಮಾಡಿದ್ದರಿಂದ ಇದೀಗ ವಿದ್ಯಾರ್ಥಿಗಳ ಸಂಖ್ಯೆ 268ಕ್ಕೇರಿದ್ದು ಇಲ್ಲಿ ಇಂಗ್ಲಿμï ಮಾಧ್ಯಮವನ್ನೂ ಆರಂಭಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆ ನಾವೆಲ್ಲರೂ ಜವಾಬ್ದಾರಿಯನ್ನು ಹಂಚಿಕೊಂಡು ಕಾರ್ಯನಿರ್ವಹಿಸಿದಾಗ ಸರ್ಕಾರಿ ಶಾಲೆಗಳು ಉಳಿಯುವುದು ಮಾತ್ರವಲ್ಲ, ಇತರೆ ಶಾಲೆಗಳಂತೆ ಸಮರ್ಥವಾಗಿ ಬೆಳೆದು ನಿಲ್ಲುತ್ತವೆ. ಆ ನಿಟ್ಟಿನಲ್ಲಿ ಮುಂದೆಯೂ ಕಾರ್ಯೋನ್ಮುಖರಾಗೋಣ ಎಂದು ಶಾಸಕರು ಇದೇ ವೇಳೆ ಕರೆ ನೀಡಿದರು.