Recent Posts

Sunday, January 19, 2025
ಸುದ್ದಿ

ನ್ಯಾಯಾಲಯ, ತಹಶೀಲ್ದಾರರ ಆದೇಶಕ್ಕೂ ಕಿಮ್ಮತ್ತು ನೀಡದೆ ಅಕ್ರಮ ಕಾಮಗಾರಿ : ಸರ್ಕಾರಿ ಜಾಗ ಕಬಳಿಸಲು ಸ್ಥಳೀಯ ಪ್ರಭಾವಿಗಳ ಹುನ್ನಾರ – ಕಹಳೆ ನ್ಯೂಸ್

ಬೆಳ್ತಂಗಡಿ: ಕಣಿಯೂರು ಗ್ರಾಮದಲ್ಲಿ ಸರಕಾರಿ ಜಮೀನು ಕಬಳಿಸುವ ಭೂ ಮಾಫಿಯಾ ತಲೆ ಎತ್ತಿದೆಯೇ ಎಂಬ ಅನುಮಾನ ಶುರುವಾಗಿದ್ದು, ತಹಶೀಲ್ದಾರರ ಸೂಚನೆಗೂ ಬೆಲೆ ಕೊಡದೆ ಅಕ್ರಮ ಕಾಮಗಾರಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇಷ್ಟೂ ಸಾಲದು ಎಂಬಂತೆ ಅಕ್ರಮದ ಕುರಿತು ದೂರು ನೀಡಿದವರ ಮನೆ ಸಂಪರ್ಕ ರಸ್ತೆಯನ್ನು ಮುಚ್ಚುವಲ್ಲಿವರೆಗೂ ಇದು ಮುಂದುವರಿದಿರುವುದು ತಾಲೂಕಿನಲ್ಲಿ ಅಚ್ಚರಿ ಮೂಡಿಸಿದೆ.

ಕಣಿಯೂರು ಗ್ರಾಮದ ಸರ್ವೆ ನಂ.228 ರಲ್ಲಿ ಸರಕಾರಿ ಜಾಗವನ್ನು ಸ್ಥಳೀಯ ನಿವಾಸಿ ಸ್ನೇಹಲತಾ, ರೋಹಿತ್ ಶೆಟ್ಟಿ ಕುಪ್ಪೆಟ್ಟಿ, ಮತ್ತು ಜೆ.ಸಿ.ಬಿ. ಮಾಲಕ ಶರತ್ ಎನ್ನುವವರು ಅತಿಕ್ರಮಿಸುತ್ತಿರುವುದನ್ನು ಕಂಡು ಸ್ಥಳೀಯರು ಬೆಳ್ತಂಗಡಿ ತಹಶೀಲ್ದಾರರಿಗೆ ದೂರು ನೀಡಿದ್ದರು. ಇದರಿಂದ ಕೋಪಿತಗೊಂಡ ಅತಿಕ್ರಮಿಗಳು ಸ್ಥಳೀಯ ದೂರುದಾರರ ಮನೆಗೆ ಹಲವು ವರ್ಷಗಳಿಂದ ಇದ್ದ ಸಂಪರ್ಕ ರಸ್ತೆಗೆ 2017 ರಿಂದ ಬೆಳ್ತಂಗಡಿ ನ್ಯಾಯಾಲಯದ ಯಥಾಸ್ಥಿತಿ ಆದೇಶ ನೀಡಿದ್ದರೂ, ಕಾನೂನು ಬಾಹಿರವಾಗಿ ರಸ್ತೆಯನ್ನು ಅಗೆದು ಮಣ್ಣು ತುಂಬಿ ಸಂಪರ್ಕ ರಸ್ತೆಯನ್ನು ಮುಚ್ಚಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ನೀಡಿದ ದೂರಿಗೆ 2023ರ ಡಿಸೆಂಬರ್ 21 ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಕಂದಾಯ ನಿರೀಕ್ಷಕರಾದ ಪಾವಡಪ್ಪ ದೊಡ್ಡಮಣಿ, ಕಣಿಯೂರು ಗ್ರಾಮ ಲೆಕ್ಕಾಧಿಕಾರಿ ಉಷಾ, ಗ್ರಾಮ ಸಹಾಯಕ ಬಾಲಕೃಷ್ಣ, ಮತ್ತು ಉಪ್ಪಿನಂಗಡಿ ಪೋಲೀಸ್ ನಿರೀಕ್ಷಕರಾದ ರಾಜೇಶ್ ರವರು ಮತ್ತು ಸಿಬ್ಬಂದಿಗಳು ರಸ್ತೆ ತಡೆ ಮಾಡಿರುವುದನ್ನು ತೆರವುಗೊಳಿಸಿದ್ದರು. ಆದರೆ ಇದೀಗ ಮತ್ತೆ ಇದೇ ಸ್ಥಳದಲ್ಲಿ ಅಕ್ರಮ ಕಾಮಗಾರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.