Recent Posts

Monday, January 20, 2025
ಸುದ್ದಿ

ಬಸ್ಸಿನಡಿಗೆ ಬಿದ್ದ ಸೈಕಲ್ ಸವಾರ ಪವಾಡ ಸದೃಶ ಪಾರು – ಕಹಳೆ ನ್ಯೂಸ್

ಕುಂದಾಪುರ : ಬಸ್ಸಿನಡಿಗೆ ಬಿದ್ದ ಸೈಕಲ್ ಸವಾರ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ, ಪವಾಡ ಸದೃಶವಾಗಿ ಪಾರಾದ ಘಟನೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಶಾಸ್ತ್ರಿ ಸರ್ಕಲ್ ಬಳಿ ಸೈಕಲ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಬೈಂದೂರು ಕಡೆಗೆ ಏಕಾಏಕಿ ತಿರುಗುತ್ತಿದ್ದ ಖಾಸಗಿ ಬಸ್‌ನಡಿಗೆ ಬಿದ್ದಿದ್ದಾರೆ.ಈ ವೇಳೆ ಬಸ್ಸನ್ನು ಚಾಲಕ ನಿಲ್ಲಿಸಿದ್ದರಿಂದ ಯಾವುದೇ ಅನಾಹುತ ಆಗಿಲ್ಲ. ಇಲ್ಲದಿದ್ದರೆ ಸೈಕಲ್ ಸವಾರರಿಗೆ ಏನಾದರೂ ಅನಾಹುತ ಆಗುವ ಸಂಭವವೂ ಇತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು