Tuesday, January 21, 2025
ಸುದ್ದಿ

ಲಿಟ್ಲ್ ಫ್ಲವರ್ ಶಾಲೆಯಲ್ಲಿ “ವಾಶ್ ಇನ್ ಸ್ಕೂಲ್ ” ಸ್ವಚ್ಛತೆಯ ಕುರಿತಾದ ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ಲಿಟ್ಲ್ ಫ್ಲವರ್ ಶಾಲೆ, ದರ್ಬೆ ಪುತ್ತೂರು ಇಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ರೋಟರಿ ಅಂಗ ಸಂಸ್ಥೆಯಾದ ವಿನ್ಸ್ ವತಿಯಿಂದ ಸ್ವಚ್ಛತೆಯ ಕುರಿತಾದ ಜಾಗೃತಿ ಕಾರ್ಯಕ್ರಮ “ವಾಶ್ ಇನ್ ಸ್ಕೂಲ್ ” ಕಾರ್ಯಕ್ರಮವು ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ರೋ. ಗ್ರೇಸಿ ಗೊನ್ಸಾಲ್ವಿಸ್ ಅಧ್ಯಕ್ಷತೆಯಲ್ಲಿ ನೆರವೇರಿತು.


ಸಂಪನ್ಮೂಲ ವ್ಯಕ್ತಿಗಳಾದ ದಂತ ವೈದ್ಯರಾದ ರೋ.ಡಾ. ಶ್ರೀ ಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳಾದ ತಾವು ದೈಹಿಕ ಸ್ವಚ್ಛತೆ, ಮಾನಸಿಕ ಸ್ವಚ್ಛತೆ ಮತ್ತು ಆಂತರಿಕ ಸ್ವಚ್ಛತೆಯ ಕಡೆಗೆ ವಿಶೇಷ ಗಮನವನ್ನು ಕೊಡಬೇಕು,ಸ್ವಚ್ಛತೆ ಮಾನವನ ಘನತೆಯನ್ನು ಎತ್ತಿ ತೋರಿಸುತ್ತದೆ. ಸ್ವಚ್ಚತೆ ವ್ಯಕ್ತಿಯ ವ್ಯಕ್ತಿತ್ವದ ಪ್ರತಿಬಿಂಬ” ಎಂದರು.ವೇದಿಕೆಯಲ್ಲಿ ರೋಟರಿ ಕ್ಲಬ್ ಗಳ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ಕ್ಲಬ್ ಸರ್ವೀಸ್ ಡೈರೆಕ್ಟರ್ ರೋ. ಸ್ವಾತಿ ಮಲ್ಲಾರ. ವಿನ್ಸ್ ಇದರ ಮಾಜಿ ಅಧ್ಯಕ್ಷರಾದ ರೋ.ಜೇರೋಮಿಯಸ್ ಪಾಯಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ. ವೆನಿಶಾ ಬಿ ಎಸ್ ಸ್ವಾಗತಿಸಿ. ವಿನ್ಸ್ ಅಧ್ಯಕ್ಷರಾದ ರೋ. ಪ್ರೆಸ್ಸಿ ಲೋಬೊ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ. ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು