Tuesday, January 21, 2025
ಸುದ್ದಿ

ಹಿರೆಬಂಡಾಡಿ ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಅನುದಾನ : ಶಾಸಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು ; ಹಿರೆಬಂಡಾಡಿ ಗ್ರಾಮದಲ್ಲಿ ಕಾಲನಿ ರಸ್ತೆಗಳು ತೀರಾ ಹದಗೆಟ್ಟಿದ್ದು ರಸ್ತೆ ಕಾಮಗಾರಿಗೆ ಅನುದಾನ ನೀಡುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಹಿರೆಬಂಡಾಡಿ ಗ್ರಾಮದ ಕೆಮ್ಮಾರ ಅಗರಿ ಪರಿಶಿಷ್ಟ ಕಾಲನಿ ರಸ್ತೆಯ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಹಿರೆಬಂಡಾಡಿ ಗ್ರಾಮ ಅಭಿವೃದ್ದಿಯಾಗಬೇಕಿತ್ತು, ಇಲ್ಲಿನವರೇ ಶಾಸಕರಾಗಿದ್ದರೂ ರಸ್ತೆಗಳಿಗೆ ಕಾಂಕ್ರೀಟೀಕರಣ ಮಾಡಿಲ್ಲ ಯಾಕೆ ಎಂಬುದು ನನಗೆ ಗೊತ್ತಿಲ್ಲ. ನಾನು ಎಂದೂ ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದಿಲ್ಲ. ಕಾಂಗ್ರೆಸ್ ಏರಿಯಾ, ಬಿಜೆಪಿ ಏರಿಯಾ ಎಂದು ನೋಡದೆ ನಾನು ಕ್ಷೇತ್ರದ ಶಾಸಕನಾಗಿ ರಾಜಧರ್ಮವನ್ನು ಪಾಲಿಸುವೆ ಎಂದು ಶಾಸಕರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳು ಅಭಿವೃದ್ದಿ ಹೊಂದಲಿದೆ ಎಂದು ಭರವಸೆ ನೀಡಿದರು. ಪುತ್ತೂರು ಶಾಸಕರಾದ ಅಶೋಕ್ ರಐಯವರು ಅಭಿವೃದ್ದಿಯಲ್ಲಿ ಯಾವುದೇ ರಜಕೀಯ ಮಾಡುತ್ತಿಲ್ಲ ಈ ಕಾರಣಕ್ಕೆ ಅವರು ಜನರ ಪ್ರೀತಿಗಳಿಸುತ್ತಿದ್ದಾರೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷರಾದ ಮುರಳೀಧರ್ ರೈ ಮಠಂತಬೆಟ್ಟು, ಅಶ್ರಫ್ ಬಸ್ತಿಕಾರ್,ವಲಯಾಧ್ಯಕ್ಷರಾದ ರವಿಪಟಾರ್ತಿ, ಅಶ್ರಫ್ ಬಸ್ತಿಕಾರ್, ಅಗರಿ ಬಾಬು, ಬೂತ್ ಅಧ್ಯಕ್ಷ ಶೌಕತ್ ಕೆಮ್ಮಾರ, ಸೇಸಪ್ಪ ನೆಕ್ಕಿಲು, ಹರಿಪ್ರಸಾದ್, ಸೇಸಪ್ಪ ಗೌಡ, ವಸಂತಿ ಮೊದಲಾದವರು ಉಪಸ್ಥಿತರಿದ್ದರು.