Friday, September 20, 2024
ಸುದ್ದಿ

ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದ ಕಾಡಾನೆ ದಾಳಿ – ಕಹಳೆ ನ್ಯೂಸ್

ಬೆಳ್ತಂಗಡಿ: ತಾಲೂಕಿನ ಅರಸಿನ ಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಹತ್ಯಡ್ಕ ಗ್ರಾಮ ವ್ಯಾಪ್ತಿಯ ಕೃಷಿಕರಿಗೆ ಮತ್ತೆ ಕಾಡಾನೆ ಕಾಟ ಆರಂಭಗೊಂಡಿದ್ದು, ಗ್ರಾ.ಪಂ. ವತಿಯಿಂದ ಅಳವಡಿಸಿದ್ದ ಸೋಲಾರ್‌ ದೀಪಗಳ ಬ್ಯಾಟರಿ ಕದ್ದಿರುವುದೇ ಈ ತೊಂದರೆಗೆ ಪ್ರಮುಖ ಕಾರಣ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ.

ಕೊಂಚ ನಿಟ್ಟುಸಿರು ಬಿಟ್ಟಿದ್ದ ಕೃಷಿಕರು ಮತ್ತೆ ಕಾಡಾನೆಗಳ ಕಾಟದಿಂದ ನಿದ್ದೆಗೆಟ್ಟಿದ್ದಾರೆ. ಕಿಡಿಗೇಡಿಗಳ ಸಣ್ಣ ಕೃತ್ಯವೊಂದು ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ. ಸಂಜೆ 6.30ರ ವೇಳೆಗೆ ಆನೆಗಳ ಕಾಟ ಆರಂಭಗೊಂಡರೆ, ರಾತ್ರಿ 1 ಗಂಟೆಯವರೆಗೂ ತೋಟದಲ್ಲೇ ಇರುತ್ತವೆ. ಬಳಿಕ ಗರ್ನಲ್‌ ಸ್ಫೋಟಿಸಿ ಆನೆಗಳನ್ನು ಹೆದರಿಸಿ ಓಡಿಸಬೇಕಾದ ಸ್ಥಿತಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ಯಡ್ಕ ಮೀಸಲು ಅರಣ್ಯ ಪ್ರದೇಶದ ಕೊಕ್ಕಡ-ಶಿಶಿಲ ರಸ್ತೆ ಬದಿಯ ಕೃಷಿಕರಿಗೆ ಕಾಡಾನೆಗಳು ತೊಂದರೆ ನೀಡುತ್ತಿವೆ. ಹೀಗಾಗಿ ಸೋಲಾರ್‌ ದೀಪಗಳ ದುರಸ್ತಿಗೆ ಸಂಬಂಧಪಟ್ಟವರು ಕ್ರಮ ಕೈಗೊಂಡು ಕಿಡಿಗೇಡಿಗಳ ವಿರುದ್ಧವೂ ಕ್ರಮ ಜರಗಿಸಬೇಕಿದೆ ಎಂದು ಕೃಷಿಕರು ಆಗ್ರಹಿಸಿದ್ದಾರೆ.

ಜಾಹೀರಾತು