Recent Posts

Sunday, January 19, 2025
ಸುದ್ದಿ

ನಾನು ಕಾಂಗ್ರೆಸ್ ಸೇರಲ್ಲ ; ಮೋದಿ ವಿರೋಧಿಸಲ್ಲ, ನರೇಂದ್ರ ಮೋದಿ ನನ್ನ ನೆಚ್ಚಿನ ಪ್ರಧಾನಿ ಎಂದ ಮುತ್ತಪ್ಪ ರೈ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಜಯಕರ್ನಾಟಕದ ಸಂಸ್ಥಾಪಕಾಧ್ಯಕ್ಷರಾದ ಮುತ್ತಪ್ಪ ರೈ ಈವಾರ ಪುತ್ತೂರಿಗೆ ಆಗಮಿಸಿದ್ದರು ಆ ಸಮಯದಲ್ಲಿ ಪುತ್ತೂರಿನಲ್ಲಿ ಕಾಂಪ್ಲೆಕ್ಸ್ ಒಂದರಲ್ಲಿ ಮಳಿಗೆ ಒಂದನ್ನು ಉದ್ಘಾಟಿಸಿಸಲು ರೈ ಆಗಮಿಸಿದ್ದರು, ಆ ವೇಳೆ ಅಲ್ಲೇ ಪಕ್ಕದಲ್ಲಿದ್ದ ಕಾಂಗ್ರೆಸ್ ಕಛೇರಿಗೂ ತೆರಳಿ ಸಹಜವಾಗಿಯೇ ಕುಶಲೋಪರಿ ವಿಚಾರಿಸಿದ್ದರು‌. ಜೊತೆಗೆ ವಿಸಿಟರ್ಸ್ ಬುಕ್ ನಲ್ಲೂ ತಮ್ಮ ಹೆಸರು ನೋಂದಾಯಿಸಿದ್ದರು‌.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನೇ ಕಾರಣವಾಗಿಟ್ಟುಕೊಂಡು ಕೆಲವು ಕಿಡಿಗೇಡಿಗಳು ಮುತ್ತಪ್ಪ ರೈ ಕಾಂಗ್ರೆಸ್ ಸೇರ್ತಾರೆ ಲೋಕಸಭೆಗೆ ದಕ್ಷಿಣ ಕನ್ನಡದಲ್ಲಿ ಸ್ಪರ್ಧಿಸ್ಥಾರೆ ಎಂಬ ಸುಳ್ಳು ಸುದ್ದಿಯನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು, ಅಲ್ಲದೇ, ಕೆಲ ಮಾಧ್ಯಮಗಳೂ ವರದಿ ಮಾಡಿಟ್ಟು, ಈ ಕುರಿತು ಸ್ವತಃ ಮುತ್ತಪ್ಪ ರೈಯವರೇ ಕಹಳೆ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

” ನಾನು ಕಾಂಗ್ರೆಸ್ ಸೇರಲ್ಲ, ನಾನು ಮೋದಿಯವರನ್ನು ವಿರೋಧಿಸಲ್ಲ, ನನ್ನ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ಇದು ಕಿಡಿಗೇಡಿಗಳ ಕೃತ್ಯ ” ಎಂದು ರೈ ಹೇಳಿದ್ದಾರೆ.

ನ್ಯೂಸ್ ಡೆಸ್ಕ್, ಪುತ್ತೂರು