ಪೆರ್ನಾಜೆ: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಡಿ ೨೦ರಂದು ಮುಂಜಾನೆ ಕುಮಾರ್ ಪೆರ್ನಾಜೆ ಒಂದು ತೆಂಗಿನ ಮರ ಎರಡು ಅಡಿಕೆ ಮರ ಮೂರು ಬಾಳೆ ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ ತಿಂದು ಹಲವು ಬೈನೇ ಮರಗಳನ್ನು ನಾಶ ಮಾಡಿ ಕೆರೆಯಲ್ಲಿ ಈಜಾಡಿದೆ ಸಮೀಪದ ರಾಘವೇಂದ್ರ ಭಟ್ರ ತೋಟ ದಲ್ಲೂ ಮೂರು ಬಾಳೆ ಗಿಡಗಳನ್ನು ನಾಶ ಮಾಡಿದೆ.
ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾ ಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿAದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ನೂಜಿಬೈಲು
ತನಕ ಹಾನಿಗೊಳಿಸಿದೆ. ಅರಣ್ಯ ಇಲಾಖೆಯವರು ರಾತ್ರಿ ಸುತ್ತುವರಿಯುತ್ತಿದ್ದರೂ ಕೃಷಿ ಹಾನಿ ಮಾಡುತ್ತಲೇ ಇದೆ ಇನ್ನಾದರೂ ಪ್ರಾಣ ಹಾನಿಯಾಗದಂತೆ ಕೃಷಿಕರು ಎಚ್ಚರ ವಹಿಸಬೇಕಾಗಿದೆ.