Friday, September 20, 2024
ಸುದ್ದಿ

ಪ್ರತಿಭಟನೆ ಮಧ್ಯೆಯೂ ದೇಗುಲ ಪ್ರವೇಶಿಸುತ್ತಿದ್ದ ಇಬ್ಬರು ಮಹಿಳೆಯರ ತಡೆದ ಪ್ರತಿಭಟನಾಕಾರರು –

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸಿ ನಡೆಯುತ್ತಿರುವ ಭಾರಿ ಪ್ರತಿಭಟನೆ ಮಧ್ಯೆಯೂ ದೇಗುಲ ಪ್ರವೇಶಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಪ್ರತಿಭಟನಾಕಾರರು 100 ಮೀ. ಅಂತರದಲ್ಲೇ ತಡೆದಿದ್ದಾರೆ.

ಕೇರಳದ ಓರ್ವ ಮಹಿಳೆ ಸೇರಿ ಆಂಧ್ರಪ್ರದೇಶದ ಮಹಿಳೆಯರಿಬ್ಬರು ದೇಗುಲ ಪ್ರವೇಶಿಸಲು ಯತ್ನಿಸಿದ ಮೊದಲ ಮಹಿಳೆಯರು ಎನಿಸಿಕೊಂಡಿದ್ದು, ಇನ್ನೇನು ಕೆಲವೇ ಮೀ. ದೂರಗಳಷ್ಟಿರುವಾಗ ಪ್ರತಿಭಟನಾಕಾರರು ತಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದ ಮಹಿಳೆ, ಪತ್ರಕರ್ತೆಯಾಗಿರುವ ಲಿಬಿ ಸಿ.ಎಸ್‌. ಎಂಬವರು ದೇಗುಲಕ್ಕೆ ಪ್ರವೇಶಿಸುತ್ತಿರುವ ಕುರಿತು ಮಂಗಳವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು ನೋಡಿದ ಅಯ್ಯಪ್ಪ ಸ್ವಾಮಿ ಭಕ್ತರು, ಅವರು ದೇಗುಲವನ್ನು ಪ್ರವೇಶಿಸುವ ಮಾರ್ಗದಿಂದಲೇ ಆಕೆಯನ್ನು ತಡೆಯಲು ನಿರ್ಧರಿಸಿದ್ದರು.

ಜಾಹೀರಾತು

ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಲಿಬಿ, ಸ್ನೇಹಿತರೇ, ನಾವು ನಾಲ್ವರು ಶಬರಿಮಲೆಗೆ ಭೇಟಿ ನೀಡುತ್ತಿದ್ದೇವೆ. ಇವರಲ್ಲಿ ನನ್ನಂತೆ ನಾಸ್ತಿಕರು ಮತ್ತು ಇಬ್ಬರು ಭಕ್ತರು ಇದ್ದಾರೆ ಎಂದು ಹೇಳಿದ್ದರು.

ಈ ಮಹಿಳೆಯರನ್ನು ಶಬರಿಮಲೆಯಿಂದ 65 ಕಿ.ಮೀ. ದೂರದಲ್ಲಿರುವ ಪಂಬಾದಲ್ಲಿ ಸುತ್ತುವರಿದಿರುವ ಪ್ರತಿಭಟನಾಕಾರರಿಂದ ಪೊಲೀಸರು ರಕ್ಷಿಸಿದ್ದರು.