ನಾವೂರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಿಂದ ಪೆರಿಯಪಾದೆ ಪುನಃ ಪ್ರತಿಷ್ಠಾನ ಕಲಶೋತ್ಸವಕ್ಕೆ ಮೆರವಣಿಗೆ ಮೂಲಕ ಸಾಗಿ ಬಂದ ಹೊರೆಕಾಣಿಕೆ – ಕಹಳೆ ನ್ಯೂಸ್
ಬಂಟ್ವಾಳ: ಪೆರಿಯಪಾದೆ ಶ್ರೀ ದುಗಲಾಯ, ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾನ ಕಲಶೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆಯು ನಾವೂರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿಯಿಂದ ದೈವಸ್ಥಾನಕ್ಕೆ ಸಾಗಿತು.
ನಾವೂರು ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುರಳಿ ಭಟ್, ದೈವಸ್ಥಾನಕ್ಕೆ ಸಂಬAಧಪಟ್ಟ ವಿವಿಧ ಗುತ್ತಿನ ಪ್ರಮುಖರು, ಶ್ರೀ ದುಗಲಾಯ ಕೊಡಮಣಿತ್ತಾಯ ಸೇವಾ ಟ್ರಸ್ಟ್ ಅಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ಉಪಾಧ್ಯಕ್ಷ ಕೆ.ಮನೋಜ್‌ಕುಮಾರ್ ರಾವ್ ಅಣೆಜ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಕೋಶಾಧ್ಯಕ್ಷ ಚಂದ್ರಹಾಸ ಮೇಂಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಪ್ರಧಾನ ಕಾರ್ಯದರ್ಶಿ ಎನ್.ಧನಂಜಯ ಶೆಟ್ಟಿ ಸರಪಾಡಿ, ಸೇವಾ ಟ್ರಸ್ಟ್ ಟ್ರಸ್ಟಿಗಳು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಕ್ತರು ಸಮರ್ಪಿಸಿದ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಅಡಿಕೆ, ಬಾಳೆಗೊನೆ, ತರಕಾರಿ, ದಿನಸಿ ಸಾಮಾಗ್ರಿಗಳನ್ನು ಮೊದಲಾದ ಸುವಸ್ತುಗಳನ್ನು ಕ್ಷೇತ್ರಕ್ಕೆ ಸಾಆಗಿಸಿ ಉಗ್ರಾಣದಲ್ಲಿ ಜೋಡಿಸಲಾಯಿತು.