Saturday, November 23, 2024
ಸುದ್ದಿ

ನರೇಂದ್ರ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸ ಮಾಲಿಕೆ“ ಅಯೋಧ್ಯಾ ರಾಮ” ರಾಷ್ಟ್ರೀಯ ಏಕತೆಯ ಶಕ್ತಿ ಶ್ರೀರಾಮ – ರಾಧಾಕೃಷ್ಣ ಅಡ್ಯಂತಾಯ – ಕಹಳೆ ನ್ಯೂಸ್

ರಾಮನೆಂದರೆ ಭಾರತದ ಅಸ್ಮಿತೆ,ಇಲ್ಲಿನ ಏಕತೆ ಮತ್ತು ಅಖಂಡತೆಯ ಸಂಕೇತ. ಹಲವು ವಿಧಗಳಲ್ಲಿ ರಾಮನು ಭಾರತೀಯರ ಹಂಬಲವಾದ ಉನ್ನತ ಮೌಲ್ಯಗಳುಳ್ಳ ಬಾಳ್ವೆಗೊಂದು ಆದರ್ಶ.ಹೀಗಾಗಿ ಅಯೋಧ್ಯೆಯು ಯುಗಯುಗಾಂತರಗಳಿAದಲೂ ಭಾರತೀಯರ ಶ್ರದ್ಧೆ,ಭಕ್ತಿ ಮತ್ತು ನಂಬಿಕೆಗಳ ಪೂಜ್ಯ ಸ್ಥಾನವಾಗಿದೆ.ರಾಮನು ಪ್ರತಿಯೊಬ್ಬರ ಹೃದಯದಲ್ಲಿ ವಾಸಿಸುತ್ತಾನೆ. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯು ಹಲವು ವರ್ಷಗಳ ಸುದೀರ್ಘ ಹೋರಾಟದ ವಿಜಯವನ್ನು ಸೂಚಿಸುತ್ತದೆ.“ಎಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿನ ನಿವೃತ್ತ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ ಇವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ,ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಿದ ರಾಮನ ವ್ಯಕ್ತಿತ್ವದ ಸಮಗ್ರ ವರ್ಣನೆಯ ಉಪನ್ಯಾಸ ಮಾಲಿಕೆ “ಅಯೋಧ್ಯಾರಾಮ” ಕರ‍್ಯಕ್ರಮದಲ್ಲಿ ,“ಅಯೋಧ್ಯಾ ಮುಕ್ತಿ ಆಂದೋಲನ” ಎಂಬ ವಿಚಾರವಾಗಿ ಅವರು ಮಾತನಾಡಿದರು.

ಯಾವುದೇ ದೊಡ್ಡ ಚಳವಳಿಯಾದರೂ ಅದರ ಆಂತರ್ಯದಲ್ಲಿ ಅಲ್ಲಿನ ಜನರ ಆಶೋತ್ತರಗಳು,ಮಹದಾಸೆಗಳು ಮತ್ತು ಶಕ್ತಿಗಳ ಸಂಚಯವಾಗುತ್ತದೆ.ರಾಮಜನ್ಮಭೂಮಿ ಆಂದೋಲನವು ಭಾರತದ ರಾಜಕೀಯ ದಿಕ್ಕನ್ನೇ ಬದಲಾಯಿಸಿತು. ಹಿಂದೂಗಳ ಭಾವನೆ ಭಾರತಕ್ಕಷ್ಟೇ ಅಲ್ಲದೆ ವಿಶ್ವಕ್ಕೆ ಗೊತ್ತಾಯಿತು.ಇದು ಸುದೀರ್ಘ ಕಾನೂನು ಮತ್ತು ಸಾಮಾಜಿಕ-ಧಾರ್ಮಿಕ ಸಂಘರ್ಷದ ಆರಂಭವನ್ನು ಗುರುತಿಸಿತು.ಎಂದು ಹೇಳಿದರು.
ಅಯೋಧ್ಯಾ ಆಂದೋಲನವು ಕೇವಲ ಅಯೋಧ್ಯೆಗೆ ಸೀಮಿತವಾಗಿರಲಿಲ್ಲ. ಅಥವಾ ಒಂದು ವಿವಾದಿತ ನಿವೇಶನದ ಮೇಲೆ ಪುನಃ ಹಿಂದೂಗಳು ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುವುದಷ್ಟೇ ಇದರ ಅಂತಿಮ ಉದ್ದೇಶವಾಗಿರದೆ ನಿಜವಾದ ಜಾತ್ಯಾತೀತ ತತ್ವದ ಗೆಲುವು ಆಗಿತ್ತು.ಎಂದು ಹೇಳಿದರು.

ಕರ‍್ಯಕ್ರಮದಲ್ಲಿ ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ,ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇದರ ಆಡಳಿತ ಮಂಡಳಿಯ ಅಧ್ಯಕ್ಷರು,ಸಂಚಾಲಕರು,ಸದಸ್ಯರು,ಮುಖ್ಯಗುರುಗಳು,ಶಿಕ್ಷಕವೃAದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರ‍್ಯಕ್ರಮದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಶಿಕ್ಷಕರಾದ ಶ್ರೀಮತಿ ವೀಣಾಸರಸ್ವತಿ ವಂದಿಸಿದರು.ನರೇAದ್ರ ಪ.ಪೂ. ಕಾಲೇಜಿನ ಉಪನ್ಯಾಸಕರಾದ ಕು. ರಮ್ಯಾ ಕರ‍್ಯಕ್ರಮವನ್ನು ನಿರೂಪಿಸಿದರು.