Thursday, January 23, 2025
ಸುದ್ದಿ

ಸವಿ ಇಲೆಕ್ಟ್ರಾನಿಕ್ಸ್ ಹೌಸ್ ಆಫ್ ಫರ್ನಿಚರ್ಸ್ & ಹೋಮ್ ಅಪ್ಲಾಯನ್ಸ್, ಸವಿ ಫೂಟ್ ವೇರ್ ಹಾಗೂ ಪ್ರಗತಿ ಎಲೆಕ್ಟ್ರಿಕಲ್ & ರೆಫ್ರಿಜರೇಷನ್ ಸೇಲ್ಸ್ & ಸರ್ವಿಸ್ ಮಳಿಗೆಯ ಶುಭಾರಂಭ – ಕಹಳೆ ನ್ಯೂಸ್

ಉಪ್ಪಿನಂಗಡಿ : ಸವಿ ಇಲೆಕ್ಟ್ರಾನಿಕ್ಸ್ ಹೌಸ್ ಆಫ್ ಫರ್ನಿಚರ್ಸ್ & ಹೋಮ್ ಅಪ್ಲಾಯನ್ಸ್, ಸವಿ ಫೂಟ್ ವೇರ್ ಹಾಗೂ ಪ್ರಗತಿ ಎಲೆಕ್ಟ್ರಿಕಲ್ & ರೆಫ್ರಿಜರೇಷನ್ ಸೇಲ್ಸ್ & ಸರ್ವಿಸ್ ಮಳಿಗೆಯು ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲೆಯ ಎದುರುಗಡೆ ಇರುವ ಮಾಲಿಕುದಿನಾರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಕಾರ್ಯಕ್ರಮ ಜರಗಿತು. ಈ ಸಮಾರಂಭದಲ್ಲಿ ಬೆಳ್ತಂಗಡಿ ಶಾಸಕರಾದ ಶ್ರೀಯುತ ಹರೀಶ್ ಪೂಂಜಾ ರವರು ದೀಪ ಬೆಳಗಿಸಿ, ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶ್ರೀ ಸಂಜೀವ ಮಠoದೂರು ಮಾಜಿ ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರ,ಶ್ರೀಮತಿ ಲಲಿತಾ ಅಧ್ಯಕ್ಷರು ಗ್ರಾಮ ಪಂಚಾಯತ್ ಉಪ್ಪಿನಂಗಡಿ, ಶ್ರೀ ಕರುಣಾಕರ ಸುವರ್ಣ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಉಪ್ಪಿನಂಗಡಿ,ಶ್ರೀ ಎಚ್. ಯೂಸುಫ್ ಹಾಜಿ ಅಧ್ಯಕ್ಷರು ಮಾಲಿಕುದ್ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ, ಶ್ರೀ ಸುಂದರ ಗೌಡ ಉದ್ಯಮಿಗಳು ಉಪ್ಪಿನಂಗಡಿ, ಶ್ರೀ ಪ್ರಶಾಂತ್ ಡಿ ಕೋಸ್ತಾ ಅಧ್ಯಕ್ಷರು,ಛೆoಬರ್ ಆಫ್ ಕಾಮರ್ಸ್, ಉಪ್ಪಿನಂಗಡಿ. ಹಾಗೂ ಇನ್ನು ಹಲವು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಆಗಮಿಸಿದ ಅತಿಥಿ ಅಭ್ಯಾಗತರನ್ನು ಸವಿ ಎಲೆಕ್ಟ್ರಾನಿಕ್ಸ್ ಮಾಲಕರಾದ ನವೀನ್ ಕುಮಾರ್ ಆರ್.ಎಸ್, ಸವಿ ಫೂಟ್ ವೇರ್ ಮಾಲಕರಾದ ಬಾಲಕೃಷ್ಣ ಎಂ, & ಜಯಪ್ರಕಾಶ್ ಕಳುವಾಜೆ, ಹಾಗೂ ಪ್ರಗತಿ ಎಲೆಕ್ಟ್ರಿಕಲ್ಸ್ ಮಾಲಕರಾದ ರಾಘವ ಬೊಳೊಲಿ ಇವರು ಶುಭಾರಂಭ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯತಿಗಣ್ಯರು, ಗ್ರಾಹಕರನ್ನು ಆತ್ಮೀಯವಾಗಿ ಸ್ವಾಗತಿಸಿ ಉಪಚರಿಸಿದರು.