ಅಶಕ್ತರಿಗೆ ನೆರಳಾಗುವ ವೃಕ್ಷದಂತೆ ಕಳೆದ ಎರಡು ವರ್ಷಗಳಲ್ಲಿ 45 ಲಕ್ಷಕ್ಕೂ ಅಧಿಕ ಸೇವಾಧನವನ್ನು ಸಮಾಜಕ್ಕೆ ಅರ್ಪಿಸಿದೆ. ಧಾರ್ಮಿಕ ಕ್ಷೇತ್ರಗಳ ಸೇವಾನಿಧಿ ಯೋಜನೆ, ತುರ್ತು ಅಪಘಾತ, ನಿಧಿ,ಕಾರ್ಯಕರ್ತರಿಗೆ ಕ್ಷೇಮನಿಧಿ,ಹಾಗೂ ಮಹಾಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ಪ್ರಯತ್ನ ಮಾಡುತ್ತಿದೆ. ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಯೋಜನೆ ಯಶಸ್ವೀಯಾಗಿ ಮುನ್ನಡೆಯುತ್ತಿದ್ದು 5 ಜನ ಫಲಾನುಭವಿಗಳಿಗೆ ಕೂದಲ ಕುಲಾವಿ (ವಿಗ್) ಹಸ್ತಾಂತರಿಸಲಾಗಿದೆ.
ಯುವಶಕ್ತಿ ರಕ್ತನಿಧಿ 10,000 ಯುನಿಟ್ ರಕ್ತ ಪೂರೈಕೆಯ ಸಮೀಪದಲ್ಲಿದ್ದು ಕೆಲವೇ ದಿನಗಳಲ್ಲಿ ಹತ್ತು ಸಾವಿರದ ಗಡಿ ದಾಟಲಿದೆ. ತೃತೀಯ ವರ್ಷಕ್ಕೆ ಪಾದಾರ್ಪಣೆಯ ಸಂಭ್ರಮವನ್ನು ವಿವಿಧ ಭಾಗಗಳಲ್ಲಿ ಸೇವಾಭಿಯಾನದ ಮೂಲಕ ವಿಶೇಷವಾಗಿ ಆಚರಿಸಲಾಗಿದೆ. ಸೇವಾಪಥ ಆರಂಭಗೊಂಡ ಭೂಕೈಲಾಸ ಕಾರಿಂಜ ,ಕದ್ರಿ ಕ್ಷೇತ್ರ,ಶ್ರೀ ಕಡೇಶಿವಾಲಯ ದೇಗುಲಗಳಲ್ಲಿ ವಿಶೇಷ ಪೂಜೆಯ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು.
ವಿಶೇಷ ಸೇವಾಭಿಯಾನ ನಡೆದಿದ್ದು ವೃದ್ದಾಶ್ರಮ/ಮಕ್ಕಳ ಆಶ್ರಮಗಳಿಗೆ ಆಹಾರ ಪೂರೈಕೆ,ಅಯ್ಯಪ್ಪಾ ವೃತಾಧಾರಿಗಳಿಗೆ ಫಲಾಹಾರ/ಭೋಜನ,ಸಿಗ್ನಲ್ ನಲ್ಲಿರುವ ಪೋಲೀಸರಿಗೆ, ರೈಲ್ವೇ ಸಿಬ್ಬಂದಿಗಳಿಗೆ,ಭದ್ರತಾ ಸಿಬ್ಬಂದಿಗಳಿಗೆ,ಆಸ್ಪತ್ರೆಯ ಸಿಬ್ಬಂದಿಗಳಿಗೆ,ಬಿಕ್ಷುಕರಿಗೆ ಕಾರ್ಮಿಕ ವರ್ಗಕ್ಕೆ ತಂಪುಪಾನೀಯ /ಹಣ್ಣು,ರಸ್ತೆ ಬದಿಯ ನಿರ್ಗತಿಕರಿಗೆ ಆಹಾರ,ಚಳಿಗೆ ಬೆಡ್ ಶೀಟ್,ಕುಕ್ಕೆ ಯ ಆನೆಗೆ ಹಣ್ಣು ತರಕಾರಿ ,ನೆಟ್ಲ ಕ್ಷೇತ್ರದ ಬಸವನಿಗೆ ಬಾಳೆಗೊನೆ,ಹುರುಳಿ ಸಮರ್ಪಿಸಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಮಂಗಳೂರು, ಪುತ್ತೂರು, ಬೆಂಗಳೂರು, ಮಡಿಕೇರಿ, ಮೂಡಬಿದ್ರೆ, ಬಂಟ್ವಾಳ, ಸುತ್ತಮುತ್ತಲಿನ 26 ಕೇಂದ್ರಗಳಲ್ಲಿ ಸೇವಾಭಿಯಾನ ಯಶಸ್ವೀಯಾಗಿ ನಡೆದಿದೆ. ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಅಭಿಯಾನ ನಡೆಸಲಾಗಿದೆ. ಫೆಬ್ರವರಿ 2024 ರಲ್ಲಿ ದ್ವಿತೀಯ ವಾರ್ಷಿಕ ಸಂಭ್ರಮ ನಡೆಯಲಿದ್ದು ಇನ್ನಷ್ಟು ಸೇವಾಚಟುವಟಿಕೆಗಳಿಗೆ ಆ ವಾರ್ಷಿಕ ಸಂಭ್ರಮ ಸಾಕ್ಷಿಯಾಗಲಿದೆ.