Wednesday, January 22, 2025
ಸುದ್ದಿ

ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿರುವ ಪಡುಮಾರ್ನಾಡ್ ಗ್ರಾಮದ ನಿವಾಸಿ ಮಹಾಬಲ ದೇವಾಡಿಗ ಅವರಿಗೆ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ) ನಿಂದ ಆರ್ಥಿಕ ನೆರವು – ಕಹಳೆ ನ್ಯೂಸ್

ಮೂಡುಬಿದಿರೆ : ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿರುವ ಪಡುಮಾರ್ನಾಡ್ ಗ್ರಾಮದ ಸೌಹಾರ್ದ ನಗರದ ನಿವಾಸಿ ಮಹಾಬಲ ದೇವಾಡಿಗ ಅವರಿಗೆ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ) ಅಮನಬೆಟ್ಟು ಇದರ ವತಿಯಿಂದ ರೂ 10,000 ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.

ಮಹಾಬಲ ದೇವಾಡಿಗ ಅವರ ಕುಟುಂಬವು ಆರ್ಥಿಕವಾಗಿ ತೀರ ಹಿಂದುಳಿದಿದ್ದು ಜೀವನ ಸಾಗಿಸಲು ಅವರ ಪತ್ನಿ ಆಸ್ಪತ್ರೆಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ಡಯಾಲಿಸ್ ಗಾಗಿ ಮಂಗಳೂರಿಗೆ ಹೋಗುತ್ತಿರುವುದರಿಂದ ಖರ್ಚಿನ ವೆಚ್ಚ ಹೆಚ್ಚಾಗುತ್ತಿದೆ. ಇಬ್ಬರು ಮಕ್ಕಳಿದ್ದು ಪುತ್ರ ಈಗಷ್ಟೆ ಕೆಲಸಕ್ಕೆ ಸೇರಿ ಕೊಂಡಿದ್ದಾನೆ. ಮಗಳು ಪದವಿ ಓದುತ್ತಿದ್ದಾಳೆ. ಇವರ ಅಸಹಾಯಕ ಪರಿಸ್ಥಿತಿಯನ್ನು ಕಂಡು ಸಾಯಿ ಮಾರ್ನಾಡ್ ಸೇವಾ ಸಂಸ್ಥೆಯು ತಮ್ಮ 18ನೇ ಯೋಜನೆ ಮೂಲಕ ಸಹಾಯಧನ ನೀಡಿ ಮಾನವೀಯತೆ ಮೆರೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು