Wednesday, January 22, 2025
ಸುದ್ದಿ

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ವಲಯ ಅಧ್ಯಕ್ಷ ಲೀಜೋ ಜೋಶ್ ಅಧಿಕೃತ ಭೇಟಿ – ಕಹಳೆ ನ್ಯೂಸ್

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ವಲಯ ಅಧ್ಯಕ್ಷರ ಅಧಿಕೃತ ಭೇಟಿ ನಡೆಯಿತು. ಲಯನ್ಸ್ ಜಿಲ್ಲೆ 317D ಯ ವಲಯ ಅಧ್ಯಕ್ಷ ಲೀಜೋ ಜೋಶ್ ಅವರು ತಮ್ಮ ಅಧಿಕೃತ ಭೇಟಿಗಾಗಿ ಕುಕ್ಕೆ ಸುಬ್ರಮಣ್ಯ ಕ್ಲಬ್ ಗೆ ಆಗಮಿಸಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಮಚಂದ್ರ ಪಳಂಗಾಯ ವಹಿಸಿದ್ದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತೀಶ ಕೂಜುಗೋಡು ಸ್ವಾಗತಿಸಿದರು. ಲಯನ್ಸ್ ಕ್ಲಬ್ ಉಪಾಧ್ಯಕ್ಷ ಅಶೋಕ್ ಕುಮಾರ್ ಮೂಲೆಮಜಲು ವಲಯ ಅಧ್ಯಕ್ಷರ ಪರಿಚಯಿಸಿದರು. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಪ್ರಾಸ್ತಾವಿಕದೊಂದಿಗೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ ಜಗತ್ತಿಗೆ ಶಾಂತಿ ಸಂದೇಶಕ್ಕಾಗಿ ನಡೆದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ಜಸ್ವಿತ್ ತೋಟ 9ನೇ ತರಗತಿ ಪ್ರಥಮ ಸ್ಥಾನವನ್ನು, ಸಿಂಜನ್ ಕೆ ಎಸ್ 8ನೇ ತರಗತಿ ದ್ವಿತೀಯ ಸ್ಥಾನವನ್ನು ,ಹಾಗೂ ಲಹರಿ ಯನ್ ವಿ 9ನೇ ತರಗತಿ ದ್ವಿತೀಯ ಸ್ಥಾನವನ್ನು ಪಡೆದು, ಅವರುಗಳನ್ನ ವಲಯ ಅಧ್ಯಕ್ಷರು ಸನ್ಮಾನಿಸಿದರು. ವಲಯ ಅಧ್ಯಕ್ಷ ದಂಪತಿಗಳನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.

ನೆರೆಯ ಲಯನ್ಸ್ ಕ್ಲಬ್ಗಳಾದ ಗುತ್ತಿಗಾರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಜಯರಾಮ ಕಡ್ಲಾರು, ಸಂಪಾಜೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಯೋಗೀಶ್, ಪಂಜ ಲೈನ್ಸ್ ಕ್ಲಬ್ಬಿನ ಅಧ್ಯಕ್ಷ ದಿಲೀಪ್ ಬಾಬಲುಬೆಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೂ ವಿವಿಧ ಕ್ಲಬ್ ಗಳ ಪದಾಧಿಕಾರಿಗಳು, ಸದಸ್ಯರುಗಳು, ಆಹ್ವಾನಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.