Recent Posts

Sunday, January 19, 2025
ಸುದ್ದಿ

ಗುಂಡಿನ ದಾಳಿ: ಮೂವರು ಉಗ್ರರ ಬಲಿ, ಓರ್ವ ಪೊಲೀಸ್‌ ಅಧಿಕಾರಿ ಹುತಾತ್ಮ – ಕಹಳೆ ನ್ಯೂಸ್

ಶ್ರೀನಗರ: ಉಗ್ರರು ಮತ್ತು ಭದ್ರತಾಪಡೆ ನಡುವೆ ಶ್ರೀನಗರದ ಫಾತೇ ಕದಲ್‌ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದು, ಓರ್ವ ಪೊಲೀಸ್‌ ಅಧಿಕಾರಿ ಹುತಾತ್ಮರಾಗಿದ್ದಾರೆ.

ಬುಧವಾರ ಮುಂಜಾನೆ ಫಾತೇ ಕದಲ್‌ನಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾಪಡೆಯೊಂದಿಗೆ ರಾಷ್ಟ್ರೀಯ ಶಶಸ್ತ್ರ ಪಡೆ ಮತ್ತು ಕೇಂದ್ರ ಮೀಸಲು ಪಡೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಮೂವರು ಉಗ್ರರು ಬಲಿಯಾಗಿದ್ದಾರೆ. ಅಲ್ಲದೆ ಪೊಲೀಸ್‌ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಎಸ್‌ಎಸ್‌ಪಿ ಇಮ್ತಿಯಾಜ್‌ ಇಸ್ಮೈಲ್‌ ಪರ್ರೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳದಲ್ಲಿ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯ ಮುಂದುವರಿಸಿದ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲ ದಿನಗಳ ಹಿಂದಷ್ಟೇ ಉಗ್ರರು ಮತ್ತು ಭದ್ರತಾಪಡೆ ನಡುವೆ ನಡೆದ ಕಾಳಗದಲ್ಲಿ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಇದಕ್ಕೂ ಮುನ್ನ ಹಂದ್ವಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿಯೂ ಇಬ್ಬರು ಉಗ್ರರು ಬಲಿಯಾಗಿದ್ದರು.