Thursday, January 23, 2025
ಸುದ್ದಿ

ಬಂಟ್ವಾಳ : ಬೈಕ್ ಸ್ಕಿಡ್ ಆಗಿ ಯುವಕ ಸಾವು – ಕಹಳೆ ನ್ಯೂಸ್

ಬಂಟ್ವಾಳ : ನಾಟಕ ಕಲಾವಿದನೋರ್ವ ಬೈಕ್ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಗ್ಗ ಸಮೀಪದ ಕೊಡ್ಯಮಲೆ ಎಂಬಲ್ಲಿ ಮುಂಜಾನೆ ವೇಳೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಡ್ಯಮಲೆ ನಿವಾಸಿ ಗೌಮ್ (28) ಮೃತಪಟ್ಟ ಅವಿವಾಹಿತ ಯುವಕ. ಈತ ಬೆಳುವಾಯಿಯಲ್ಲಿ ನಡೆದ ಕದಂಬ ನಾಟಕದಲ್ಲಿ ಭಾಗವಹಿಸಿ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ಕದಂಬ ನಾಟಕದ ಓರ್ವ ಕಲಾವಿದನಾಗಿ ಮಿಂಚುವ ಯುವಕನಾಗಿದ್ದಾನೆ. ಹಗಲು ಹೊತ್ತಿನಲ್ಲಿ ಬಿಸಿರೋಡಿನ ವಿಜಯಲಕ್ಷ್ಮಿ ಸಂಸ್ಥೆಯಲ್ಲಿ ಅಕೌಂಟಿAಗ್ ವಿಭಾಗದ ಕೆಲಸಗಾರನಾಗಿದ್ದಾನೆ.
ರಾತ್ರಿ ಬೆಳುವಾಯಲ್ಲಿ ನಡೆದ ನಾಟಕ ಮುಗಿಸಿ ವಾಪಸು ಆಗುತ್ತಿದ್ದವೇಳೆ ಮನೆಯ ಸಮೀಪವೇ ದುರಂತ ನಡೆದಿದೆ.ಅಪಘಾತ ನಡೆದು ಬೆಳಿಗ್ಗೆ ವರೆಗೆ ಯಾರು ನೋಡಿರಲಿಲ್ಲ. ಬೆಳಿಗ್ಗೆ ದಾರಿಯಲ್ಲಿ ಹೋಗುವವರು ನೋಡಿ ಪೋಲೀಸರಿಗೆ ತಿಳಿಸಿದ್ದಾರೆ. ಟ್ರಾಫಿಕ್ ಎಸ್.ಐ.ಸುತೇಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.