Thursday, January 23, 2025
ಸುದ್ದಿ

ಡಿ.31 ( ಇಂದು ) ಯು.ಆರ್. ಪ್ರಾಪರ್ಟಿಸ್‌ನ ಬಪ್ಪಳಿಗೆ ʻಶ್ರೀಮಾ ಹಿಲ್ಸ್ʼ ವಸತಿ ಬಡಾವಣೆ ಉದ್ಘಾಟನೆ ಸಮಾರಂಭ – ಕಹಳೆ ನ್ಯೂಸ್

ಪುತ್ತೂರು : ಯು.ಆರ್. ಪ್ರಾಪರ್ಟಿಸ್‌ನವರ ನೂತನ ವಸತಿ ಬಡಾವಣೆ ʻಶ್ರೀಮಾ ಹಿಲ್ಸ್ʼ ಬಪ್ಪಳಿಗೆಯ ಪ್ರಕೃತಿ ರಮಣೀಯ ಪರಿಸರದಲ್ಲಿ ಇಂದು ಡಿ 31ರಂದು ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.


ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಹಾಗೂ ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಪ್ರಖ್ಯಾತ ಸಂಸ್ಥೆಯಾಗಿರುವ ಯು.ಆರ್. ಪ್ರಾಪರ್ಟಿಸ್ ನ ಮಾರ್ಗದರ್ಶನದಲ್ಲಿ ಮಹಿಳಾ ಉದ್ಯಮಿ ರಕ್ಷಾ ಎಸ್.ಆರ್. ಅವರ ಮಾಲಕತ್ವದಲ್ಲಿ ಸಕಲ ಸೌಲಭ್ಯಗಳನ್ನೊಳಗೊಂಡು ನಗರ ಸಭೆಯ ನಿಯಮಾವಳಿಯಂತೆ, ಯೋಜನಾ ಪ್ರಾಧಿಕಾರದ ನಿಯಮಾವಳಿಯಂತೆ ಶ್ರೀಮಾಹಿಲ್ಸ್ ಬಡಾವಣೆ ರೂಪುಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮಾ ಹಿಲ್ಸ್ ವಸತಿ ಬಡಾವಣೆಯು ಬಹುವಿನ್ಯಾಸ ನಕ್ಷೆಯ ಬಡಾವಣೆಯಾಗಿ ರೂಪುಗೊಂಡಿದ್ದು. ಬಡಾವಣೆಯೊಳಗೆ ಬೀದಿ ದೀಪ ವ್ಯವಸ್ಥೆ, ಸ್ವತಂತ್ರ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದ್ದು, ಅತ್ಯಂತ ಆಕರ್ಷಣೀಯವಾಗಿ ಬಡಾವಣೆ ರೂಪುಗೊಂಡಿದೆ.

ಪ್ರತಿಯೊಬ್ಬರಿಗೂ ನಿವೃತ್ತ ಜೀವನದಲ್ಲಿ ಅಥವಾ ಸೇವಾ ಜೀವನದಲ್ಲಿ ಸ್ವಂತ ಮನೆಯನ್ನು ಕಟ್ಟಬೇಕೆಂಬ ಸಹಜ ಅಭಿಲಾಷೆ ಇದೆ. ಅಂತವರ ಅಭಿಲಾಷೆಗೆ ಪೂರಕವಾಗಿ ಅವರ ಕನಸಿನ ಮನೆ ಸಾಕಾರಗೊಳ್ಳಲು ವಸತಿ ಬಡಾವಣೆ ಶ್ರೀಮಾಸಿಟಿ ಸಕಲ ಸೌಲಭ್ಯಗಳನ್ನು ಹೊಂದಿದೆ.