Thursday, January 23, 2025
ಸುದ್ದಿ

ಪುತ್ತಿಗೆ : ಮಹಿಳಾ ಗ್ರಾಮಸಭೆ ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸಿ : ವಿದ್ಯಾ ಸಿ.ಹೆಚ್ – ಕಹಳೆ ನ್ಯೂಸ್

ಮೂಡುಬಿದಿರೆ: ಹೆಣ್ಣು ಮಕ್ಕಳು, ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಆರೋಗ್ಯ ಇಲಾಖೆಯ ವಿದ್ಯಾ ಸಿ.ಹೆಚ್. ಹೇಳಿದರು.


ಅವರು ಪುತ್ತಿಗೆ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷೆ ರಾಧಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಬಾಣಂತಿ ಮತ್ತು ಶಿಶುವಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಪುತ್ತಿಗೆ ವಲಯದ ಅಂಗನವಾಡಿ ಮೇಲ್ವೀಚಾರಕಿ ಕಾತ್ಯಾಯಿನಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹೆಣ್ಣು ಮಕ್ಕಳು ಆರೋಗ್ಯವಂತರಾಗಿರಲು ಫಾಸ್ಟ್ ಫುಡ್ ಗಳನ್ನು ತ್ಯಜಿಸಿ ಆರೋಗ್ಯಕ್ಕೆ ಬೇಕಾಗಿರುವ ಉತ್ತಮ ಆಹಾರಗಳನ್ನು ಸೇವಿಸಬೇಕು. ಹೆತ್ತವರು ಕೂಡಾ ತಮ್ಮ ಮಕ್ಕಳಿಗೆ ಉತ್ತಮ ಆಹಾರವನ್ನು ಮಾಡಿ ಕೊಡಬೇಕೆಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೈಯಕ್ತಿಕ ಸಹಾಯಧನ ವಿತರಣೆ : ಶೇ 25 ರ ಅನುದಾನದಲ್ಲಿ ಮನೆ ದುರಸ್ತಿಗೆ 5 ಮಂದಿಗೆ ರೂ. 74894, ಕಂಪ್ಯೂಟರ್ ಶಿಕ್ಷಣಕ್ಕೆ ಇಬ್ಬರಿಗೆ 10000, ಔಷಧೋಪಚಾರಕ್ಕೆ ಇಬ್ಬರಿಗೆ 10,000, ಮದುವೆಗೆ ನಾಲ್ವರಿಗೆ 20,000, ಶಿಕ್ಷಣಕ್ಕೆ15 ಮಂದಿಗೆ 67000, ನಾಲ್ವರು ಅಂಗವಿಕಲರಿಗೆ 20,000
ಸಹಾಯ ಧನ ವಿತರಿಸಲಾಯಿತು.
ಪಂಚಾಯತ್ ಸದಸ್ಯರು, ಪಿಡಿಒ ಭೀಮ ನಾಯಕ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಈ ಸಂದರ್ಭದಲ್ಲಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು