Sunday, January 19, 2025
ಅಂಕಣ

ಕೆ.ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೨

” ಕಾರ್ಮುಗಿಲು “

 

ಓ ಮುಗಿಲ ಸಾಲುಗಳೆ ಎತ್ತ ಸಾಗುವಿರಿ l
ಸೂರ್ಯ ಚಂದ್ರರ ನೋಡೆ ll
ಧ್ರುವ ತಾರೆಗಳ ಕಾಡೆ l
ಬೇಗ ಓಡುವಿರಿ ಜಾರುವಿರಿ ಸಾಗದಿರಿ ll೧ll

ಜಾಹೀರಾತು
ಜಾಹೀರಾತು
ಜಾಹೀರಾತು

ನಾ ಬರಲೆ ಹತ್ತಿರಕೆ l
ಆ ಬಾನಿನೆತ್ತರಕೆ l
ಮರೆಮರೆತು ಈ ಜಗದ ನೆನಪನೆಲ್ಲ l
ರವಿಶಶಿಯ ಹತ್ತಿರಕೆ l
ಸಿಡಿಲು ಗುಡುಗಿನ ಎತ್ತರಕೆ l
ಹೊಸಹೊಸ ಕಲ್ಪನಾ
ಸೊಬಗಿದೆಲ್ಲ ll೨ll

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಬಾಲರವಿ ನೆನಪಿನಂಗಳದಲ್ಲಿ l
ತಾ ನಸುನಾಚಿ ನಗೆಗಡಲಿನಲ್ಲಿ ll
ಮೆಲುನಗೆ ಬೆಳದಿಂಗಳನು ಚೆಲ್ಲಿ l
ಏಸುಕಾಲ ಕಾಯಲಿ ಅನವರತವಿಲ್ಲಿ ll೩ll

ಓ ಮೋಡಗಳೆ ಓಡದಿರಲಿ l
ನೋಟದಲಿ ಓಡದೇ ಇರಿ ll
ಓಡದಿರಲಿ ತಿರುತಿರುಗಿ ನೋಡದಿರಲಿ ll
ಅಲ್ಲೆ, ಅಲ್ಲೇ ನಿಲ್ಲಿ l
ಬಿಳಿಯ ಕೇಶರಾಶಿಯ ಚೆಲ್ಲಿ l ಜಾರುವಿರಿ ಬೀಳದಿರಿ ಕರಿಕಗ್ಗತ್ತಲಲ್ಲಿ ll೪ll

ಓ ಮೋಡಗಳೆ, ನೀವೇ ಕರಗಿ ಹನಿಯ ಮಳೆಯಾಗುವಿರಂತೆ l
ದೇವಪೂಜೆಗೆ ಕರ್ಪೂರ ಕರಕರಗಿ ನೀರು ನೀರಾದಂತೆ l
ನೀವಿಳೆಗೆ ಬರಬೇಕು ಬರಬರ ಮಳೆಯಾಗಿ ಕಳೆಯಾಗಿ l
ಕಳೆಯಾಗಿ ಬರಬೇಕು ಫಳಫಳನೆ ಹೊಳೆದು ಕಳಕಳಿಯಾಗಿ ll೫ll

Leave a Response