Thursday, January 23, 2025
ಸುದ್ದಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಕುಂದಾಪುರ ವಲಯದ ವತಿಯಿಂದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಕುಂದಾಪುರ ವಲಯ ದ ವತಿಯಿಂದ ವಿವಿಧ ದಾನಿಗಳು ಪ್ರಾಯೋಜಿಸಿದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಅತ್ಯಂತ ಸರಳವಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರದಲ್ಲಿ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್ ಶೆಟ್ಟಿ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಶಿಕ್ಷಕರಿಗೆ ಉಪಯುಕ್ತವಾದ ಕಾರ್ಯವನ್ನು ಕೈಗೊಂಡ ಶಿಕ್ಷಕ ಸಂಘಟನೆಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಉಡುಪಿ ಡಯಟ್ ನ ಹಿರಿಯ ಉಪನ್ಯಾಸಕ ಪ್ರಭಾಕರ ಮಿತ್ಯಾಂತ ಶಿಕ್ಷಕರ ಸಂಘಟನೆಯ ಉತ್ತಮ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿದರು. ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ ಕುಮಾರ ಶೆಟ್ಟಿ ಎಂ ಪ್ರಾಸ್ತಾವಿಕ ಮಾತುಗಳನ್ನಾಡಿ ದಿನದರ್ಶಿಕೆಯನ್ನು ಪ್ರಾಯೋಜಿಸಿದ ದಾನಿಗಳಿಗೆ ಶುಭ ಹಾರೈಸಿದರು. ಕೋಶಾಧಿಕಾರಿ ಶ್ರೀನಾಥ ಜಿ ಪೂಜಾರಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮೂರ್ತಿ ಎಂ.ಎಚ್, ಬಿ.ಆರ್.ಪಿ ರೋಹಿತ್ ಮಿಲ್ಟನ್ ಕ್ರಾಸ್ತಾ, ಬಿ.ಐ.ಇ.ಆರ್.ಟಿ ಪ್ರದೀಪ ಕುಮಾರ್, ಸಿ.ಆರ್.ಪಿ ಸುನಿತಾ ಬಾಂಜ್, ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಮ ಮೊಗವೀರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಹಕಾರ್ಯದರ್ಶಿ ಸುಚಿತ್ರಾ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು