Wednesday, January 22, 2025
ಸುದ್ದಿ

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಸುಬ್ರಹ್ಮಣ್ಯ : ಯಶಸ್ವಿನಿ ಆನೆಯ ಮಾವುತನಿಗೆ ನಿವೃತ್ತಿ : ಮಾಲಾರ್ಪಣೆ ಮಾಡಿ ಆಶೀರ್ವಾದಿಸಿ ಬೀಳ್ಕೊಟ್ಟ ಗಜರಾಜ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾವುತರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಧರ್ಮಸ್ಥಳ ಅವರು ಇಂದು ತನ್ನ ವೃತ್ತಿ ಜೀವನದ ಬದುಕಿನಿಂದ ನಿವೃತ್ತಿಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಇಷ್ಟರವರೆಗೆ ಸೇವೆ ಸಲ್ಲಿಸಿರುವ ಮಾವುತ ಶ್ರೀನಿವಾಸ್ ಅವರಿಗೆ ಯಶಸ್ವಿನಿ ಆನೆಯು ಮಾಲಾರ್ಪಣೆ ಮಾಡುವುದರ ಮೂಲಕ ಧನ್ಯವಾದ ಅರ್ಪಿಸಿ, ನಿವೃತ್ತಿ ಜೀವನಕ್ಕೆ ಶುಭಾಹಾರೈಸಿ, ಆಶೀರ್ವಾದ ಮಾಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು