ಅಯೋಧ್ಯೆ ರಾಮಮಂದಿರಕ್ಕೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲಾ ವಿಗ್ರ – ಕಹಳೆ ನ್ಯೂಸ್
ಇದರಲ್ಲಿ ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೂಡ ಒಬ್ಬರು.
ಇದೀಗ ಅರುಣ್ ಅವರು ಕೆತ್ತನೆ ಮಾಡಿದ ರಾಮಲಲಾ ಮೂರ್ತಿಯನ್ನೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಲಾಗಿದೆ. 51 ಇಂಚಿನ ರಾಮಲಲಾ ಮೂರ್ತಿ ಕೆತ್ತನೆ ಕಾರ್ಯ ಮುಗಿದಿದೆ, ಇದನ್ನು ಕೃಷ್ಣಶಿಲೆಯಲ್ಲಿ ಕೆತ್ತಲಾಗಿದೆ.
ಅರುಣ್ ಯೋಗಿರಾಜ್, ಸತ್ಯನಾರಾಯಣ ಪಾಂಡೆ ಹಾಗೂ ಜಿ.ಎಲ್ ಭಟ್ ಅವರಿಂದ ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದೆ. ಇದೀಗ ಅರುಣ್ ಅವರು ಕೆತ್ತಿರುವ ಮೂರ್ತಿಯನ್ನು ಗರ್ಭಗೃಹದಲ್ಲಿ ಹಾಗೂ ಉಳಿದೆರಡು ಮೂರ್ತಿಯನ್ನು ಮಂದಿರದ ಆವರಣದಲ್ಲಿ ಗೌರವಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.