ಮಂಗಳೂರು: ಮೊಬೈಲ್ ಸಂಪರ್ಕ ನೀಡುವ ವೇಳೆ ಆಧಾರ್ ಪಡೆಯುವುದನ್ನು ಸುಪ್ರೀಂ ಕೋರ್ಟ್ ರದ್ದುಮಾಡಿದ ಬಳಿಕ, ಸುಮಾರು 50 ಕೋಟಿ ಗ್ರಾಹಕರ ಮೊಬೈಲ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಆಧಾರ್ ನೀಡಿ ಮೊಬೈಲ್ ಸೇವೆ ಪಡೆದುಕೊಂಡ ಗ್ರಾಹಕರು, ಈಗ ತಮ್ಮ ಗುರುತಿಗಾಗಿ ಬೇರೊಂದು ದಾಖಲೆಯನ್ನು ನೀಡುವ ಮೂಲಕ ಸರಿಪಡಿಸಿಕೊಳ್ಳಬೇಕಿದ್ದು, ಅದರಲ್ಲೂ ಜಿಯೋ ಗ್ರಾಹಕರು ಆಧಾರ್ ಕಾರ್ಡ್ ಮೂಲಕವೇ ಸಿಮ್ ಪಡೆದುಕೊಂಡಿರುವ ಕಾರಣ ಇತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ಯೆ ಎದುರಿಸಲಿದ್ದಾರೆ.
50 ಕೋಟಿ ಮೊಬೈಲ್ ಸಂಖ್ಯೆಗಳು ಸ್ಥಗಿತಗೊಂಡರೆ ಆಗಬಹುದಾದ ತೀವ್ರ ತೊಂದರೆಯನ್ನು ಮನಗಂಡಿರುವ ಕೇಂದ್ರ ಸರ್ಕಾರ, ಇದನ್ನು ಪರಿಹರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇಂತಹ ಗ್ರಾಹಕರಿಗೆ ಮತ್ತೊಂದು ದಾಖಲೆ ಸಲ್ಲಿಸಲು ಕಾಲಾವಕಾಶ ನೀಡಲು ಯೋಚಿಸಲಾಗಿದೆ.